ಬೆಂಗಳೂರು : ಆಪರೇಷನ್ ಸಿಂಧೂರ ಬಳಿಕ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಮೆಂಟ್ ಇಂದಿನಿಂದ ಮತ್ತೆ ಶುರುವಾಗಲಿದ್ದು, ಬೆಂಗಳೂರಲ್ಲಿ ಆರ್ಸಿಬಿ ಹಾಗೂ ಕೆಕೆಆರ್ ನಡುವೆ ಪಂದ್ಯ ನಡೆಯಲಿದೆ.
ಆರ್ಸಿಬಿ ಹಾಗೂ ಕೆಕೆಆರ್ ತಂಡಗಳು ಸಂಜೆ 7:30 ಕ್ಕೆ ಮುಖಾಮುಖಿಯಾಗಲಿವೆ. ಪಾಯಿಂಟ್ ಪಟ್ಟಿಯಲ್ಲಿ RCB ಪ್ರಸ್ತುತ 2ನೇ ಸ್ಥಾನದಲ್ಲಿದ್ದು, KKR 6ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಕೆಕೆಆರ್ ಟೂರ್ನ್ಮೆಂಟ್ ನಿಂದ ಹೊರಬೀಳಲಿದೆ.
ಐಪಿಎಲ್ ಮ್ಯಾಚ್ ಹಿನ್ನೆಲೆ ಭಾರಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಳ್ಳಲಾಗಿದೆ.

