ಗ್ಲಾಸ್ಗೊ: ಭಾರತದ ತೇಜಸ್ವಿನ್ ಶಂಕ‌ರ್ ಅವರು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ. ಕ್ರೀಡಾಕೂಟದ ಡೆಕಾಥ್ಲಾನ್‌ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎರಡು ದಿನ ನಡೆದ 10 ಕಠಿಣ ಸ್ಪರ್ಧೆಗಳ ಡೆಕಾಥ್ಲಾನ್‌ ವಿಭಾಗದಲ್ಲಿ ತೇಜಸ್ವಿನ್‌ ಒಟ್ಟು 7,976 ಅಂಕಗಳನ್ನು ಕಲೆಹಾಕುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಮೊಣಕಾಲಿನ ಗಾಯದ ಸಮಸ್ಯೆಯಿಂದ ಪ್ರಸಕ್ತ ಟೂರ್ನಿಯ ಹೈಜಂಪ್ ಸ್ಪರ್ಧೆಯಿಂದ ಹೊರಗುಳಿದಿದ್ದರು. ಆದಾಗ್ಯೂ ಗಾಯದ ಸಮಸ್ಯೆ ಮೆಟ್ಟಿ ನಿಂತ ತೇಜಸ್ವಿನ್‌ ಕಂಚಿನ ಪದಕ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.