ಹರಾರೆ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಇಂದು ನಡೆದ ಕೊನೆಯ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಟೀಮ್ ಇಂಡಿಯಾ 4-1 ಮುನ್ನಡೆ ಸಾಧಿಸುವ ಮೂಲಕ ಸರಣಿ ಗೆದ್ದಿದೆ.
ಟೀಮ್ ಇಂಡಿಯಾ ನೀಡಿದ 168 ರನ್ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 18.3 ಓವರ್ನಲ್ಲಿ 125 ರನ್ಗಳಿಗೆ ಆಲೌಟ್ ಆಗಿದೆ. ಜಿಂಬಾಬ್ವೆ ತಂಡದ ಪರ ತಡಿವಾನಾಶೆ ಮರುಮಣಿ 27, ಡಿಯೋನ್ ಮೈಯರ್ಸ್ 34, ಫರಾಜ್ ಅಕ್ರಂ 27 ರನ್ ಮಾತ್ರ ಗಳಿಸಿದ್ದರು.
ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದ ಪರ ಯಶಸ್ವಿ ಜೈಸ್ವಾಲ್ 12, ಶುಭ್ಮನ್ ಗಿಲ್ 13, ಅಭಿಷೇಕ್ ಶರ್ಮಾ 14 ರನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ನಲ್ಲೇ ನಿಂತು ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 45 ಬಾಲ್ನಲ್ಲಿ 4 ಸಿಕ್ಸರ್, 1 ಫೋರ್ ಸಮೇತ 58 ರನ್ ಮಾಡಿದರು. ರಿಯಾನ್ ಪರಾಗ್ 22, ಶಿವಂ ದುಬೆ 26 ಮತ್ತು ರಿಂಕು ಸಿಂಗ್ 11 ರನ್ ಸಿಡಿಸಿದರು. ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ 42 ರನ್ಗಳಿಂದ ಗೆದ್ದು ಬೀಗಿದೆ

