ಇಂದು ಹರಾರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ.
ಬರೋಬ್ಬರಿ 100 ರನ್ಗಳಿಂದ ಕ್ಯಾಪ್ಟನ್ ಶುಭ್ಮನ್ ಗಿಲ್ ಪಡೆ ಗೆಲುವು ಸಿಕ್ಕಿದೆ. ಭಾರತ ತಂಡ ನೀಡಿದ ಬಿಗ್ ಟಾರ್ಗೆಟ್ ಬೆನ್ನತ್ತಿದ ಜಿಂಬಾಬ್ವೆ 18.4 ಓವರ್ನಲ್ಲಿ 134 ರನ್ಗೆ ಆಲೌಟ್ ಆಗಿದೆ. ವೆಸ್ಲಿ ಮಾಧೆವೆರೆ 43, ಬ್ರಿಯಾನ್ ಬೆನೆಟ್ 26, ಜೊನಾಥನ್ ಕ್ಯಾಂಪ್‌ಬೆಲ್ 10, ಲ್ಯೂಕ್ ಜೊಂಗ್ವೆ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್ಗಳ ಬೆಂಡೆತ್ತಿದ ಗಾಯಕ್ವಾಡ್ ಕೂಡ ಅಬ್ಬರಿಸಿದರು.
ತಾನು ಆಡಿದ 47 ಬಾಲ್ನಲ್ಲಿ 1 ಸಿಕ್ಸರ್, 11 ಫೋರ್ ಸಮೇತ 77 ರನ್ ಗಳಿಸಿದರು. ಈ ಮೂಲಕ ಮತ್ತೆ ಗಾಯಕ್ವಾಡ್ ಮತ್ತೆ ಫಾರ್ಮ್ಗೆ ಬಂದರು. ಈ ಹಿಂದೆ ಗಾಯಕ್ವಾಡ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.
ಕೊನೆಗೆ ಬಂದ ರಿಂಕು ಸಿಂಗ್ ಕೂಡ ಮಿಂಚಿದರು. ಕೇವಲ 22 ಬಾಲ್ನಲ್ಲಿ 5 ಸಿಕ್ಸರ್, 2 ಫೋರ್ ಸಮೇತ 48 ರನ್ ಸಿಡಿಸಿ ಫಿನಿಶ್ ಮಾಡಿದರು. ಕ್ಯಾಪ್ಟನ್ ಗಿಲ್ ಕೇವಲ 2 ರನ್ಗೆ ಔಟಾಗಿ. ಟೀಮ್ ಇಂಡಿಯಾ ನಿಗದಿತ 20 ಓವರ್ನಲ್ಲಿ 236 ರನ್ ಕಲೆ ಹಾಕಿತ್ತು.

