ಟೀಮ್ ಇಂಡಿಯಾ ಆಟಗಾರ ದೀಪಕ್ ತಮ್ಮ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹವಾಗಿರುವ ಶುಭ ಸಂದರ್ಭಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಹಿಮಾಚಲ ಮೂಲದ ಯುವತಿಯನ್ನು ದೀಪಕ್ ಹೂಡಾ ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಒಂಬತ್ತು ವರ್ಷಗಳ ಕಾಯುವಿಕೆಯ ನಂತರ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹರ್ಯಾನ್ವಿ ಶೈಲಿಯಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಕಾಣಿಸಿಕೊಂಡಿದ್ದರು.

ಹಿಮಾಚಲ ಪ್ರದೇಶದಿಂದ ಬಂದಿರುವ ತನ್ನ ವಧುವಿಗೆ ಸೋಷಿಯಲ್ ಮೀಡಿಯಾ ಮೂಲಕ ಹೂಡಾ ಆತ್ಮೀಯ ಸ್ವಾಗತವನ್ನು ಕೋರಿದ್ದಾರೆ. ಅಲ್ಲದೆ ಕುಟುಂಬ ಮತ್ತು ಸ್ನೇಹಿತರಿಂದ ಆಶೀರ್ವಾದಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ದೀಪಕ್ ಹೂಡಾ ಅವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೀಪಕ್ ಹೂಡಾ ಈ ಹಿಂದೆ ಟೀಮ್ ಇಂಡಿಯಾ ಪರ ಆಡಿದ್ದರು. 10 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅವರು 153 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಟಿ20 ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಹೂಡಾ 17 ಇನಿಂಗ್ಸ್ಗಳಲ್ಲಿ 1 ಭರ್ಜರಿ ಶತಕದೊಂದಿಗೆ 368 ರನ್ ಕಲೆಹಾಕಿದ್ದರು.

