ಸುಮಾರು 17 ವರ್ಷಗಳ ತಪ್ಪಸ್ಸಿನ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ತವರಿಗೆ ವಾಪಸ್ ಆಗಿದೆ. ಭಾರತಕ್ಕೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸಿದರು.
ಇಂದು ಮುಂಬೈನ ವಾಂಖೆಡೆಯಲ್ಲಿ ಟಿ20 ವಿಶ್ವಕಪ್ ವಿಜಯೋತ್ಸವದ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಸಂಜೆ 6 ಗಂಟೆಯಿಂದಲೇ ಮರೈನ್ ಡ್ರೈವ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ಟೀಮ್ ಇಂಡಿಯಾ ವಿಕ್ಟರಿ ಪರೇಡ್ ನಡೆಸಿತು.
ಇನ್ನು, ವಿಕ್ಟರಿ ಪರೇಡ್ ಸಂದರ್ಭದಲ್ಲಿ ಓಪನ್ ಬಸ್ನಲ್ಲಿ ಹಿಂದೆ ನಿಂತಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ವಿರಾಟ್ ಕೊಹ್ಲಿ ಕೈ ಹಿಡಿದು ಕರೆ ತಂದರು. ಕೈ ಹಿಡಿದು ಕರೆ ತಂದು ಟ್ರೋಫಿ ಎತ್ತಿ ಹಿಡಿದ ಸೆಲಬ್ರೇಟ್ ಮಾಡಿದರು. ರೋಹಿತ್ ಕೈ ಹಿಡಿದು ಕರೆ ತಂದ ಕೊಹ್ಲಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

