ವದೆಹಲಿ: ಭಾರತೀಯ ಫುಟ್ಬಾಲ್ ದಿಗ್ಗಜ ಸುನಿಲ್ ಛೆಟ್ರಿ ಕಣ್ಣೀರು ಸುರಿಸುತ್ತಾ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು. ಗುರುವಾರ (ಜೂನ್ 6) ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಅವರು ಆಟಕ್ಕೆ ವಿದಾಯ ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಲಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

39 ವರ್ಷದ ಛೆಟ್ರಿ ಕುವೈತ್ ವಿರುದ್ಧದ ಪಂದ್ಯದ ನಂತರ ಪಲಿಕಾಡಿ ಸಾಕರ್ ದಂತಕಥೆಯಾಗಿ ತಮ್ಮ 19 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಕಳೆದ 12 ವರ್ಷಗಳಿಂದ ಭಾರತ ತಂಡದ ನಾಯಕರಾಗಿರುವ ಛೆಟ್ರಿ ದೇಶಕ್ಕಾಗಿ 151 ಪಂದ್ಯಗಳನ್ನು ಆಡಿದ್ದು, 94 ಗೋಲುಗಳನ್ನು ಗಳಿಸಿದ್ದಾರೆ. ಸುನಿಲ್ ಛೆಟ್ರಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ತುಂಬಿ ತುಳುಕುತ್ತಿತ್ತು. ಅವರಿಗಾಗಿಯೇ ಪಂದ್ಯ ವೀಕ್ಷಿಸಲು ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣದತ್ತ ಹರಿದು ಬಂದಿದ್ದರು. ದುರದೃಷ್ಟವಶಾತ್ ಸುಮಾರು 100 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹಲವು ಗೋಲು ಗಳಿಸಿ ತಂಡಕ್ಕೆ ಆಸರೆಯಾಗಿರುವ ನಾಯಕ ಛೆಟ್ರಿ ಈ ಬಾರಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯ 0-0 ಡ್ರಾನಲ್ಲಿ ಅಂತ್ಯಗೊಂಡಿತು.

ಪಂದ್ಯದ ನಂತರ ಕ್ರೀಡಾಂಗಣದಲ್ಲಿ ಭಾವುಕ ವಾತಾವರಣ ಉಂಟಾಯಿತು. ಇನ್ನು ಮೈದಾನದಲ್ಲಿ ಸುನಿಲ್ ಛೆಟ್ರಿ ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ಅಭಿಮಾನಿಗಳು ಅರಗಿಸಿಕೊಳ್ಳಲಾಗಲಿಲ್ಲ. ಛೆಟ್ರಿ ಕೂಡ ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ ಎಲ್ಲ ಆಟಗಾರರನ್ನು ಅಪ್ಪಿಕೊಂಡು ಹಸ್ತಲಾಘವ ಮಾಡಿ ಅಭಿನಂದಿಸಿದರು. ನಂತರ ಮೈದಾನದಲ್ಲಿ ಸಂಚರಿಸಿ ವೃತ್ತಿ ಜೀವನದ ಕೊನೆಯ ಯಾತ್ರೆಯಲ್ಲಿ ಜೊತೆಗಿದ್ದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.

– Thank you for everything, Captain! 🇮🇳pic.twitter.com/F4RwJIbbjm

— Mufaddal Vohra (@mufaddal_vohra) June 6, 2024