ಇತ್ತೀಚೆಗೆ ಶನಿವಾರ ಪಲ್ಲೆಕೆಲೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿದೆ. ಭಾರತ ತಂಡದ ಹೊಸ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಮೊದಲ ಗೆಲುವು ಸಾಧಿಸಿದೆ.
3 ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಇಂದು 2ನೇ ಟಿ20 ಪಂದ್ಯ ನಡೆಯಬೇಕಿದ್ದು, ಟೀಮ್ ಇಂಡಿಯಾ ವಿರುದ್ಧ ಹೇಗಾದ್ರೂ ಗೆಲ್ಲಲೇಬೇಕು ಎಂದು ಶ್ರೀಲಂಕಾ ಜಿದ್ದಿಗೆ ಬಿದ್ದಿತ್ತು. ಈಗ ಶ್ರೀಲಂಕಾ ಕನಸಿಗೆ ಮಳೆ ತಣ್ಣೀರೆರಚಿದೆ.
ಪಲ್ಲೆಕೆಲೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ, ಟೀಮ್ ಇಂಡಿಯಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹಾಗಾಗಿ ಕಳೆದ 3 ಗಂಟೆಗಳಿಂದ ಜೋರು ಮಳೆ ಬೀಳುತ್ತಿದ್ದು, ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

