ಬೆಂಗಳೂರು: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಎದುರು 8 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, 33.2 ಓವರ್ಗಳಲ್ಲಿ 156 ರನ್ ಗಳಿಸಿ ಅಲೌಟ್ ಆಯಿತು. ಗುರಿ ಬೆನ್ನತ್ತಿದ ಶ್ರೀಲಂಕಾ, ಇನ್ನೂ 24.2 ಓವರ್ಗಳು ಬಾಕಿ ಇರುವಂತಯೇ 160 ರನ್ ಗಳಿಸಿ ಜಯದ ನಗೆ ಬೀರಿತು. ಸುಲಭ ಮೊತ್ತದೆದುರು ಇನಿಂಗ್ಸ್ ಶುರು ಮಾಡಿದ ಲಂಕನ್ನರಿಗೆ ಡೇವಿಡ್ ವಿಲ್ಲಿ ಆರಂಭಿಕ ಅಘಾತ ನೀಡಿದರು.
ತಂಡದ ಮೊತ್ತ 9 ರನ್ ಆಗಿದ್ದಾಗ ಕುಶಾಲ್ ಪರರಾ (1) ಅವರನ್ನು ಮತ್ತು 23 ರನ್ ಆಗಿದ್ದಾಗ ಕುಶಾಲ್ ಮೆಂಡಿಸ್ (11) ಅವರನ್ನು ಪೆವಿಲಿಯನ್ಗೆ ಅಟ್ಟಿ ಗಮನ ಸೆಳೆದರು.