ಬಾಂಬುಲಾ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಎ ತಂಡಗಳ ತ್ರಿಕೋನ ಏಕದಿನ ಸರಣಿಯ ಫೈನಲ್ ಹಣಾಹಣಿ ಭಾನುವಾರ ನಡೆಯಲಿದ್ದು, ಭಾರತ ಮತ್ತು ಆಥಿತೇಯ ಶ್ರೀಲಂಕಾ ಮುಖಾಮುಖಿಯಾಗಲಿವೆ.
4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು 6 ಅಂಕ ಸಂಪಾದಿಸಿರುವ ಶ್ರೀಲಂಕಾ ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದರೆ, 2 ಜಯ, 2 ಸೋಲಿನೊಂದಿಗೆ 4 ಅಂಕ ಸಂಪಾದಿಸಿರುವ ಭಾರತ ಫೈನಲ್ ಪ್ರವೇಶಿಸಿತ್ತು. 3 ಸೋಲುಂಡ ಆಫ್ಘನ್ ಹೊರಬಿದ್ದಿದೆ.
ಭರ್ಜರಿ ಐಪಿಎಲ್ ಪಂದ್ಯಾವಳಿಯ ಬಳಿಕ ಏಕದಿನ ಸರಣಿಯಲ್ಲಿ ಬೃಹತ್ ಇನಿಂಗ್ಸ್ ಕಟ್ಟಲು ವಿಫಲವಾಗಿದ್ದ, ವೈಭವ್ ಸೂರ್ಯವಂಶಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಲಂಕಾ ತಂಡವನ್ನು ಮಣಿಸಬೇಕಿದ್ದರೆ, ವೈಭವ್ ಸಿಡಿಯುವುದು ಅಗತ್ಯವಾಗಿದೆ. 2 ಬಾರಿ ಭಾರತದ ವಿರುದ್ಧ ಲಂಕಾ ಹಠಾತ್ ಕುಸಿತ ಕಂಡಿರುವುದು, ಭಾರತಕ್ಕೆ ವರವಾಗುವ ಸಾಧ್ಯತೆ ಇದೆ.

