ನವದೆಹಲಿ: ನಾಳೆ ನಡೆಯಲಿರುವ ಟಿ20 ವಿಶ್ವಕಪ್ ಫಿನಾಲೆ ಪಂದ್ಯದ ಹಿನ್ನೆಲೆ ನವದೆಹಲಿಯಿಂದ ಅಹಮದಾಬಾದ್‌ಗೆ ವಿಶೇಷ ರೈಲು ಸಂಚರಿಸಲಿದೆ.
ಇಲಾಖೆಯ ಮಾಹಿತಿ ಪ್ರಕಾರ, ಈ ವಿಶೇಷ ರೈಲು ಇಂದು (ಮಾ.7) ರಾತ್ರಿ 11:45ರ ಸುಮಾರಿಗೆ ನವದೆಹಲಿಯಿಂದ ಹೊರಟು ನಾಳೆ (ಮಾ.8) ಮಧ್ಯಾಹ್ನ 2:30ರ ಸುಮಾರಿಗೆ ಸಬರಮತಿ ತಲುಪಲಿದೆ.
ಈ ರೈಲು ದೆಹಲಿ ಕಂಟೋನ್ಮೆಂಟ್, ಗುರುಗ್ರಾಮ್ ಹಾಗೂ ಜೈಪುರ ಮೂಲಕ ಹಾದುಹೋಗಲಿದೆ. ಇನ್ನೂ ಈ ರೈಲಿನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ 2nd ಎಸಿ, 3rd ಎಸಿ ಸೇರಿದಂತೆ ಒಟ್ಟು 19 ಕೋಚ್‌ಗಳನ್ನು ಹೊಂದಿದೆ.
ನಾಳೆ ಸಂಜೆ 7 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಫಿನಾಲೆ ಪಂದ್ಯ ನಡೆಯಲಿದ್ದು, ಭಾರತ ಹಾಗೂ ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿವೆ.

