ಯುರೋ ಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬರ್ಲಿನ್ನ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ರಣರೋಚಕವಾಗಿತ್ತು.ಇನ್ನು ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸ್ಪೇನ್ ಪಡೆಯು ಸತತ ದಾಳಿಯ ಮೂಲಕ ಇಂಗ್ಲೆಂಡ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಮೊದಲಾರ್ಧದ ಅರ್ಧ ಭಾಗವನ್ನು ಇಂಗ್ಲೆಂಡ್ ರಕ್ಷಣಾತ್ಮಕ ಆಟಕ್ಕೆ ಕಳೆದರು.
ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ಮುನ್ಪೆಡೆ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದರು. ಅದರಲ್ಲೂ ರಣ ಉತ್ಸಾಹದಲ್ಲಿ ಕಾಣಿಸಿಕೊಂಡ ಸ್ಪೇನ್ ಪಡೆಯ ಫಾರ್ವಡ್ ಆಟಗಾರರಾದ ಅಲ್ವಾರೊ ಮೊರಾಟಾ, ಡ್ಯಾನಿ ಓಲ್ಮೋ, ಫೆರಾನ್ ಟೊರೆಸ್ ಮತ್ತು ಲ್ಯಾಮಿನ್ ಯಮಲ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು.\
ಗೋಲಿನ ಬಳಿಕ ಇಂಗ್ಲೆಂಡ್ ಫಾರ್ವಡ್ ಆಟಗಾರರಾದ ಹ್ಯಾರಿ ಕೇನ್, ಸಾಕಾ ಮತ್ತು ಬೆಲ್ಲಿಂಗ್ಹ್ಯಾಮ್ ಸತತವಾಗಿ ಸ್ಪೇನ್ ಪೋಸ್ಟ್ನತ್ತ ದಾಳಿ ನಡೆಸಿದರು/ ಆದರೆ ಯಶಸ್ಸು ಮಾತ್ರ ದಕ್ಕಲಿಲ್ಲ. ಅದರಲ್ಲೂ ಸ್ಪೇನ್ ತಂಡದ ರಕ್ಷಣಾ ಪಡೆಯು ಆಂಗ್ಲರನ್ನು ಕಟ್ಟಿಹಾಕಲು ಅದ್ಭುತ ಯೋಜನೆ ರೂಪಿಸಿದ್ದರು. ಪರಿಣಾಮ ಹಲವು ಬಾರಿ ಗೋಲು ಬಲೆಯತ್ತ ಸಾಗಿದರೂ ನಿರಾಸೆ ಅನುಭವಿಸಬೇಕಾಯಿತು.
ಆದರೆ 73ನೇ ನಿಮಿಷದಲ್ಲಿ ಬೆಲ್ಲಿಂಗ್ಹ್ಯಾಮ್ ನೀಡಿದ ಉತ್ತಮ ಪಾಸ್ ಅನ್ನು ಗೋಲಾಗಿಸುವಲ್ಲಿ ಕೋಲ್ ಪಾಲ್ಮರ್ ಕೊನೆಗೂ ಯಶಸ್ವಿಯಾದರು. ಈ ಗೋಲಿನೊಂದಿಗೆ ಪಂದ್ಯವು 1-1 ಸಮಬಲದೊಂದಿಗೆ ಸಾಗಿತು
ಅದರಲ್ಲೂ ಪಂದ್ಯದ 90ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿಸುವಲ್ಲಿ ಇಂಗ್ಲೆಂಡ್ ಆಟಗಾರರು ಸರ್ವ ಪ್ರಯತ್ನ ನಡೆಸಿದ್ದರು. ಆದರೆ ಗೋಲು ಬಲೆಯ ಲೈನ್ನಲ್ಲಿ ನಿಂತು ಡ್ಯಾನಿ ಓಲ್ಮೋ ಹೆಡ್ ಮಾಡುವ ಮೂಲಕ ಚೆಂಡನ್ನು ತಡೆದರು. ಈ ಅದ್ಭುತ ಸೇವ್ ಸ್ಪೇನ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿತು ಎಂದರೆ ತಪ್ಪಾಗಲಾರದರು. ಅದರಂತೆ ಅಂತಿಮವಾಗಿ 2-1 ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಸ್ಪೇನ್ ಪಡೆಯು ಯುರೋ ಕಪ್ 2024ರ ಚಾಂಪಿಯನ್

