ಆರ್ಸಿಬಿ ಮಹಿಳಾ ತಂಡದ ಕ್ಯಾಪ್ಟನ್ ಹಾಗೂ ಭಾರತದ ಆಟಗಾರ್ತಿ ಸ್ಮೃತಿ ಮಂದಾನ ಅವರು ತಮ್ಮ ನಡೆಯಿಂದಲೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಕ್ರೀಸ್ನಲ್ಲಿ ಬ್ಯಾಟ್ ಹಿಡಿದು ನಿಂತರೆ ಸಿಕ್ಸರ್, ಫೋರ್ಗಳನ್ನ ಬಾರಿಸಿ ಎದುರಾಳಿ ಎದೆಯಲ್ಲಿ ಭಯ ಹುಟ್ಟಿಸೋ ಛಲಗಾರ್ತಿ. ಬ್ಯೂಟಿ, ಸ್ವೀಟಿ, ಕ್ಯೂಟ್ ಆಗಿರೋ ಸ್ಮೃತಿ ಮಂದಾನ ಮತ್ತೊಮ್ಮೆ ಫ್ಯಾನ್ಸ್ ಹೃದಯ ಗೆದ್ದಿದ್ದಾರೆ.
ಸದ್ಯ ಮಹಿಳಾ ಏಷ್ಯಾಕಪ್ ನಡೆಯುತ್ತಿದ್ದು ಟೀಮ್ ಇಂಡಿಯಾದ ಮಹಿಳಾ ಆಟಗಾರ್ತಿಯರು ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಈ ವೇಳೆ ಶ್ರೀಲಂಕಾದ ವಿಶೇಷ ಚೇತನ ಬಾಲಕಿ ಅದಿಶಾರನ್ನು ಸ್ಮೃತಿ ಮಂದಾನ ಅವರು ಭೇಟಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತ ತಂಡದ ಪರವಾಗಿ ಮೊಬೈಲ್ ಫೋನ್ ಅನ್ನು ಬಾಲಕಿಗೆ ಬಹುಮಾನವಾಗಿ ನೀಡಿದ್ದಾರೆ. ಬಾಲಕಿ ಜೊತೆ ಮಾತನಾಡಿ ಸಂತಸ ಪಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಬಾಲಕಿಯ ತಾಯಿ, ಪಂದ್ಯ ನೋಡಬೇಕೆಂದು ಮಗಳು ಹಠ ಹಿಡಿದಿದ್ದಳು. ಆದರೆ ಆಕಸ್ಮಿಕವಾಗಿ ಪಂದ್ಯ ವೀಕ್ಷಣೆಗೆ ನಮಗೆ ಅವಕಾಶ ಸಿಕ್ಕಿತು. ಮಂದಾನ ಮೇಡಂ ಅವರನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದಳು. ಅದರಂತೆ ಅವರು ನನ್ನ ಮಗಳನ್ನು ಭೇಟಿ ಮಾಡಿ ಫೋನ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಮಂದಾನ ಅವರಿಂದ ಮೊಬೈಲ್ ಗಿಫ್ಟ್ ಪಡೆದಿದ್ದಕ್ಕೆ ನನ್ನ ಮಗಳು ಲಕ್ಕಿ. ಸ್ಮೃತಿ ಮಂದಾನ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
Smriti Mandhana gifted a mobile phone to a young fan in Sri Lanka. ❤️
– Smriti, winning the heart of all. pic.twitter.com/qFSwUuR7Ce
— Johns. (@CricCrazyJohns) July 20, 2024

