ಮಂಗಳೂರು: ವಿಟಿಯು ರಾಜ್ಯಮಟ್ಟದ ಕುಸ್ತಿ ಚಾಂಪಿಯನ್ ಶಿಪ್‌ ನಲ್ಲಿ ಎಸ್‌ ಜೆಇಸಿ ಪುರುಷರ ಕುಸ್ತಿ ತಂಡ ವಿಜೇತರಾಗಿ ಹಾಗೂ ಮಹಿಳಾ ಕುಸ್ತಿ ತಂಡ ರನ್ನರಪ್ ಸ್ಥಾನವನ್ನು ಪಡೆದು ಸಂಸ್ಥೆಗೆ ಹೆಮ್ಮೆ ತಂದಿದೆ. ಈ ರಾಜ್ಯಮಟ್ಟದ ಕುಸ್ತಿ ಚಾಂಪಿಯನ್ ಶಿಪ್‌ ಅಕ್ಟೋಬರ್ 5 ಮತ್ತು 6, 2026ರಂದು ಹಳಿಯಾಳದ ವಿಡಿಐಟಿಯಲ್ಲಿ ಆಯೋಜಿಸಲಾಗಿತ್ತು.‌

ದೈಹಿಕ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಶಾ ರೋಡ್ರಿಗಸ್, ಸಹಾಯಕ ಪಿಇಡಿ ಸುಧೀರ್ ಎಂ ಹಾಗೂ ತರಬೇತುದಾರರಾದ ದೀಪಕ್ ಅವರ ಮಾರ್ಗದರ್ಶನದಲ್ಲಿ ಎಸ್‌ ಜೆಇಸಿ ತಂಡಗಳು ಈ ಗಮನಾರ್ಹ ಸಾಧನೆಯನ್ನು ದಾಖಲಿಸಿವೆ.

ಮಹಿಳಾ ತಂಡ – ಪದಕ ವಿಜೇತರು
ಶೌರ್ಯ ಎಸ್. ಶೆಟ್ಟಿ, ದ್ವಿತೀಯ ವರ್ಷದ ಎಂಬಿಎ – ಚಿನ್ನದ ಪದಕ, 55 ಕೆ.ಜಿ.ಗಿಂತ ಕಡಿಮೆ ವಿಭಾಗ
ರಕ್ಷಿತಾ ಕೆ., ನಾಲ್ಕನೇ ವರ್ಷದ ಇಸಿಇ – ಕಂಚಿನ ಪದಕ, 72 ಕೆ.ಜಿ.ಗಿಂತ ಕಡಿಮೆ ವಿಭಾಗ
ರೀಯಾ ಡಿ., ದ್ವಿತೀಯ ವರ್ಷದ ವಿ.ಎಲ್.ಏಸ್.ಐ – ಬೆಳ್ಳಿಯ ಪದಕ, 50 ಕೆ.ಜಿ.ಗಿಂತ ಕಡಿಮೆ ವಿಭಾಗ
ಪ್ರಾಪ್ತಿ ಎಲ್. ಶೆಟ್ಟಿ, ಪ್ರಥಮ ವರ್ಷದ ಇಇಇ – ಚಿನ್ನದ ಪದಕ, 53 ಕೆ.ಜಿ.ಗಿಂತ ಕಡಿಮೆ ವಿಭಾಗ

ಪುರುಷರ ತಂಡ – ಪದಕ ವಿಜೇತರು
ಅಶ್ವಿನ್ ಎಸ್. ಅಮೀನ್, ನಾಲ್ಕನೇ ವರ್ಷ, ಸಿ.ಎಸ್.ಬಿ.ಎಸ್ – ಚಿನ್ನದ ಪದಕ, 70 ಕೆ.ಜಿ.ಗಿಂತ ಕಡಿಮೆ ವಿಭಾಗ
ಸಂಕೇತ್ ಬಿ. ಚೌಟ, ಮೂರನೇ ವರ್ಷ, ಮೆಕ್ಯಾನಿಕಲ್ – ಚಿನ್ನದ ಪದಕ, 92 ಕೆ.ಜಿ.ಗಿಂತ ಕಡಿಮೆ ವಿಭಾಗ
ವಿಕ್ಯಾತ್ ವಿ. ಶೆಟ್ಟಿ, ಮೂರನೇ ವರ್ಷ, ಮೆಕ್ಯಾನಿಕಲ್ – ಕಂಚಿನ ಪದಕ, 61 ಕೆ.ಜಿ.ಗಿಂತ ಕಡಿಮೆ ವಿಭಾಗ
ಆರ್. ಎಸ್. ವಿಘ್ನೇಶ್, ದ್ವಿತೀಯ ವರ್ಷ, ಸಿ.ಎಸ್.ಇ – ಕಂಚಿನ ಪದಕ, 61 ಕೆ.ಜಿ.ಗಿಂತ ಕಡಿಮೆ ವಿಭಾಗ

ಈ ಗಮನಾರ್ಹ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದ ಎರಡೂ ತಂಡಗಳ ಕ್ರೀಡಾಪಟುಗಳನ್ನು ಹಾಗೂ ಅವರ ಮಾರ್ಗದರ್ಶಕರಾದ ಪಿಇಡಿ, ಸಹಾಯಕ ಪಿಇಡಿ ಮತ್ತು ತರಬೇತುದಾರರನ್ನು ಎಸ್‌ ಜೆಇಸಿ ಆಡಳಿತ ಮಂಡಳಿಯು ಹೃತ್ಪೂರ್ವಕವಾಗಿ ಅಭಿನಂದಿಸಿದೆ.

ಈ ಗೆಲುವು ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ, ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದ್ದು, ಸಂಸ್ಥೆಯ ಕ್ರೀಡಾ ಕ್ಷೇತ್ರದ ಸಾಧನೆಗಳಿಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.