ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ತನ್ನ ಎಂಟನೇ ಬೆಳ್ಳಿ ಪದಕವನ್ನು ಪಡೆದುಕೊಂಡಿದೆ. ಕ್ರೀಡಾಕೂಟದ ಏಳನೇ ದಿನ ಪುರುಷರ ಶಾಟ್​ಪುಟ್ ಎಫ್​46 ವಿಭಾಗದಲ್ಲಿ ಭಾರತದ ಸಚಿನ್ ಸರ್ಜೆರಾವ್ ಖಿಲಾರಿ ತನ್ನ ಎರಡನೇ ಪ್ರಯತ್ನದಲ್ಲಿ 16.32 ಮೀಟರ್ ದೂರ ಶಾಟ್​ಪುಟ್​ ಎಸೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.

ಈ ಬೆಳ್ಳಿ ಪದಕದ ಗೆಲುವಿನೊಂದಿಗೆ, ಸಚಿನ್ 40 ವರ್ಷಗಳಲ್ಲಿ ಪ್ಯಾರಾಲಿಂಪಿಕ್ ಶಾಟ್-ಪುಟ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 1984ರಲ್ಲಿ ಭಾರತ ಪುರುಷರ ಶಾಟ್‌ಪುಟ್‌ನಲ್ಲಿ ಮೊದಲ ಪದಕ ಗೆದ್ದಿತ್ತು.

ಸಚಿನ್ ಅವರ ಈ ಪದಕದೊಂದಿಗೆ ಭಾರತದ ಪದಕಗಳ ಸಂಖ್ಯೆ 21ಕ್ಕೆ ತಲುಪಿದೆ. ಏಷ್ಯನ್ ದಾಖಲೆಯ 16.32 ಮೀಟರ್ ದೂರ ಶಾಟ್​ ಪುಟ್ ಎಸೆದ ಸಚಿನ್ ಎರಡನೇ ಸ್ಥಾನ ಪಡೆದರು.