ಮುಂಬೈ, ಫೆ.28: ಗಾಯಗೊಂಡಿರುವ ಮಯಾಂಕ್ ಮಾರ್ಕಂಡೆ ಬದಲಿಗೆ ಆಲ್ ರೌಂಡರ್ ಶಮ್ಸ್ ಮುಲಾನಿ ಅವರನ್ನು ಮಾಸ್ಟರ್ ಕಾರ್ಡ್ ಇರಾನಿ ಕಪ್ ಗಾಗಿ ರೆಸ್ಟ್ ಆಫ್ ಇಂಡಿಯಾ (ಆರ್ ಒಐ) ತಂಡದಲ್ಲಿ ಹೆಸರಿಸಲಾಗಿದೆ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ.
ಮಯಾಂಕ್ ಮಾರ್ಕಂಡೆ ಅವರು ಅಭ್ಯಾಸದ ವೇಳೆ ಬಲಗೈ ತೋರುಬೆರಳಿಗೆ ಗಾಯ ಮಾಡಿಕೊಂಡಿದ್ದು, ಟೂರ್ನಿಯಿಂದ ಹೊರಗುಳಿದಿದ್ದಾರೆ.
ರೆಸ್ಟ್ ಆಫ್ ಇಂಡಿಯಾ (ಆರ್ ಒಐ) ಮಾರ್ಚ್ 1 ರಿಂದ 5 ರವರೆಗೆ ಗ್ವಾಲಿಯರ್ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ 2021-22 ರ ರಣಜಿ ಟ್ರೋಫಿ ಚಾಂಪಿಯನ್ಸ್ ಮಧ್ಯಪ್ರದೇಶವನ್ನು ಎದುರಿಸಲಿದೆ.
ತಂಡ ಇಂತಿದೆ: ಮಯಾಂಕ್ ಅಗರ್ವಾಲ್ (ನಾಯಕ), ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಬಾಬಾ ಇಂದ್ರಜಿತ್, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಅತಿತ್ ಶೇತ್, ಸೌರಭ್ ಕುಮಾರ್, ಹರ್ವಿಕ್ ದೇಸಾಯಿ, ನವದೀಪ್ ಸೈನಿ, ಮುಖೇಶ್ ಕುಮಾರ್, ಚೇತನ್ ಸಕಾರಿಯಾ, ಆಕಾಶ್ ದೀಪ್, ಶಮ್ಸ್ ಮುಲಾನಿ, ಪುಲ್ಕಿತ್ ನಾರಂಗ್, ಸುದೀಪ್ ಕುಮಾರ್ ಘರಾಮಿ.