ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಶಾ ಆಫ್ರಿದಿಗೆ ಭಾರತದ ರನ್ ಮೆಶಿನ್ ವಿರಾಟ್ ಕೊಹ್ಲಿ ಆಡಿದ ಸೂಪರ್ ಇನ್ನಿಂಗ್ಸ್ ವೃತ್ತಿ ಜೀವನದಲ್ಲೇ ಅದ್ಭುತ ಇನ್ನಿಂಗ್ಸ್ ಎಂದು ಹೊಗಳಿದ್ದಾರೆ. ದಾಖಲೆಗಳ ಸರದಾರ, ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರನಾಗಿ ಮನ್ನಣೆ ಗಳಿಸಿದ್ದಾರೆ. ತನ್ನ ಬ್ಯಾಟ್‌ನಿಂದ ಟನ್‌ಗಟ್ಟಲೆ ರನ್, ದಾಖಲೆಗಳನ್ನು ಸೃಷ್ಟಿಸಿ ವಿಶ್ವ ಕ್ರಿಕೆಟ್‌ನ್ನು ಆಳುತ್ತಿರುವ ರಾಜನಾಗಿದ್ದಾರೆ.
ಕೊಹ್ಲಿ ವೃತ್ತಿ ಜೀವನದಲ್ಲಿ ಅನೇಕ ಸ್ಮರಣೀಯ ಇನ್ನಿಂಗ್ಸ್‌ಗಳಿವೆ. ಆದರೆ, ಇವೆಲ್ಲವುಗಳಲ್ಲಿ ವಿಶೇಷವೆಂದರೆ 2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ಅಜೇಯ 82 ರನ್‌ಗಳ ಇನ್ನಿಂಗ್ಸ್. ಈ ಪಂದ್ಯದಲ್ಲಿ ಪಾಕ್ ಬೌಲರ್ ಶಾಹೀನ್ ಶಾ ಆಫ್ರಿದಿ ಕೂಡ ಇದ್ದರು. ಇದೀಗ ಮತ್ತೊಮ್ಮೆ ತಮ್ಮ ತಂಡದ ವಿರುದ್ಧ ಕೊಹ್ಲಿ ಆಡಿದ ಆ ಅದ್ಭುತ ಇನ್ನಿಂಗ್ಸ್ ನೆನಪಿಸಿಕೊಂಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿರುವ ಶಾಹೀನ್, ನನ್ನ ವೃತ್ತಿಜೀವನದಲ್ಲೇ ವಿರಾಟ್ ಕೊಹ್ಲಿ ಅವರ ಅದ್ಭುತ ಇನ್ನಿಂಗ್ಸ್ (82*) ಅನ್ನು ಮತ್ತೆ ನೋಡಿಲ್ಲ. ಸೋಲುವ ಪಂದ್ಯವನ್ನು ಗೆಲುವಿನ ಕಡೆಗೆ ತಿರುಗಿಸಿದ ರೀತಿ ಅದ್ಭುತವಾಗಿತ್ತು ಎಂದು ಕೊಹ್ಲಿಯ ಬ್ಯಾಟಿಂಗ್ ಅನ್ನು ಶಾಹೀನ್ ಶ್ಲಾಘಿಸಿದರು. ಇದೀಗ ಶಾಹೀನ್ ಅವರ ಈ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Shaheen Shah Afridi said – "Virat Kohli's 82* runs innings, I have never seen a better innings than that Kohli's innings in my career". (Star Sports). pic.twitter.com/WpXQK3P5YO
— Tanuj Singh (@ImTanujSingh) August 21, 2024

