ಬಾಂಗ್ಲಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ನಿರೀಕ್ಷೆಯಂತೆ ಕೆಲ ಆಟಗಾರರು ಸ್ಥಾನ ಪಡೆದರೆ, ಕೆಲ ಆಟಗಾರರಿಗೆ ಜಾಕ್​ಪಾಟ್​ ಹೊಡೆದಿದೆ. ಅಷ್ಟೇ ಅಲ್ಲ ದುಲೀಪ್ ಟ್ರೋಫಿಯಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್​ ನೀಡಿದರು ಕನ್ನಡಿಗ ಪಡಿಕ್ಕಲ್​ಗೆ ಗೇಟ್​ಪಾಸ್​ ನೀಡಲಾಗಿತ್ತು.

ವಿರಾಟ್​ ಕೊಹ್ಲಿ ಆಪ್ತ ಪಡಿಕ್ಕಲ್​ಗೆ 2ನೇ ಟೆಸ್ಟ್​ ಪಂದ್ಯದಲ್ಲಿ ಮಣೆ ಹಾಕುವ ಸಾಧ್ಯತೆ ಇದೆ. ಒಂದು ವೇಳೆ ಮೊದಲ ಪಂದ್ಯದಲ್ಲಿ ಟಾಪ್​ ಆರ್ಡರ್​ ಬ್ಯಾಟರ್ಸ್​​ ವಿಫಲರಾದರೆ, ದುಲೀಪ್​ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರೋ ದೇವದತ್​ಗೆ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ.

ಅನಂತಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ ಮಧ್ಯೆ ಮಹತ್ವದ ಪಂದ್ಯ ನಡೆಯುತ್ತಿದೆ. ಇದು ದುಲೀಪ್​​ ಟ್ರೋಫಿ ಟೂರ್ನಿಯಲ್ಲೇ ಮಹತ್ವದ ಪಂದ್ಯ ಆಗಿದ್ದು, ಇಂಡಿಯಾ ಡಿ ಪರ ಕನ್ನಡಿಗ ದೇವದತ್​​ ಪಡಿಕ್ಕಲ್​​ ಮಿಂಚಿದ್ದಾರೆ.

ಮಹತ್ವದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಡಿಯಾ ಡಿ ತಂಡಕ್ಕೆ ಪಡಿಕ್ಕಲ್​ ಆಸರೆಯಾದರು.  ಇಂಡಿಯಾ ಎ ಬೌಲರ್​ಗಳ ಬೆಂಡೆತ್ತಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​​​ ಪಡಿಕ್ಕಲ್​ 124 ಬಾಲ್​ನಲ್ಲಿ 92 ರನ್​ ಚಚ್ಚಿ ಶತಕ ವಂಚಿತರಾದರು. ಬರೋಬ್ಬರಿ 15 ಫೋರ್​ ಸಿಡಿಸಿದರು. ಇವರ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​​ 75ಕ್ಕೂ ಹೆಚ್ಚಿತ್ತು.