ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತ ಗುರುವಾರ ಒಂದು ಕಂಚಿನ ಪದಕ ಗೆದ್ದು ಸಂಭ್ರಮಿಸಿದರೆ ಕೆಲವು ಆಘಾತಕಾರಿ ಸೋಲುಗಳನ್ನು ಅನುಭವಿಸಿತು. ಶೂಟಿಂಗ್ ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚು ಗೆದ್ದ ಸಂಭ್ರಮದ ಬೆನ್ನಲ್ಲೇ ಸೋಲುಗಳು ಶಾಕ್ ನೀಡಿವೆ.
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕ ನಿರೀಕ್ಷೆ ಮೂಡಿಸಿದ್ದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾ ದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೊಹ್ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದಾರೆ. ಮಲೇಷಿಯನ್ನರಿಂದ ಪುರುಷರ ಡಬಲ್ಸ್‌ನ ಪದಕದ ಭರವಸೆ ಭಗ್ನಗೊಂಡಿದೆ. ಕ್ವಾರ್ಟರ್ ಫೈನಲ್ ರೋಚಕ ಪಂದ್ಯದಲ್ಲಿ 21-13, 14-21, 16-21 ರಿಂದ ಸೋಲನುಭವಿಸಿದ್ದಾರೆ.

