ಪ್ಯಾರಿಸ್: ಭಾರತದ ತಾರಾ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ 2 ಗೆಲುವಿನೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮಂಗಳವಾರ ನಡೆದ ಗುಂಪು ಹಂತದ ಕೊನೆ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಭಾರತೀಯ ಜೋಡಿಗೆ, ಇಂಡೋನೇಷ್ಯಾದ ಮುಹಮ್ಮದ್ ರಿಯಾನ್-ಫಜರ್ ಅಲ್ಫಿಯಾನ್ ವಿರುದ್ಧ 21-13, 21-13 ಗೇಮ್‌ಗಳಲ್ಲಿ ಗೆಲುವು ಲಭಿಸಿತು.
ಗುಂಪಿನಲ್ಲಿ ಒಟ್ಟು 4 ಜೋಡಿಗಳಿದ್ದವು. ಆದರೆ ಗಾಯದ ಕಾರಣಕ್ಕೆ ಸೋಮವಾರ ಜರ್ಮನಿಯ ಜೋಡಿ ಕ್ರೀಡಾಕೂಟದಿಂದ ಹೊರಬಿದ್ದಿತ್ತು. ಹೀಗಾಗಿ 3 ಜೋಡಿಗಳು ಮಾತ್ರ ಇದ್ದವು. ಭಾರತ ವಿರುದ್ಧ ಸೋಲಿನ ಹೊರತಾಗಿಯೂ ಇಂಡೋನೇಷ್ಯಾ ಕೂಡಾ ಕ್ವಾರ್ಟರ್‌ಗೇರಿದ್ದು, ಫ್ರಾನ್ಸ್ ಜೋಡಿ ಹೊರಬಿದ್ದಿದೆ. ಬುಧವಾರ ಕ್ವಾರ್ಟರ್ ಫೈನಲ್ ಡ್ರಾ ನಡೆಯಲಿದೆ.

