ದುಬೈ: ಭಾರತೀಯ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕ್ ಮಾಜಿ ಆಟಗಾರ ಶೋಯೆಬ್ ಮಲಿಕ್ ಮದುವೆಯಾಗಿ, ಜೀವನ ನಡೆಸಿ, ಬಳಿಕ ವಿಚ್ಛೇದನ ಪಡೆದಿರೋದು ಹಳೆಯ ಸಂಗತಿ. ಅತ್ತ ಮಲಿಕ್ 2ನೇ ವಿವಾಹವಾಗಿ ಸಂಸಾರ ನಡೆಸುತ್ತಿದ್ದಾರೆ. ಇತ್ತ ಸಾನಿಯಾ ತನ್ನ ಮಗನೊಂದಿಗೆ ದುಬೈನಲ್ಲಿ ಜೀವನ ನಡೆಸುತ್ತಿದ್ದಾರೆ.
ಆದರೂ ಸಾನಿಯಾ 2ನೇ ವಿವಾಹದ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಮಾಹಿತಿ ಹರಿದಾಡುತ್ತಿದೆ. ಮೊಹಮ್ಮದ್ ಶಮಿ ಮತ್ತು ಸಾನಿಯಾ ಮದುವೆಯಾಗಲಿದ್ದಾರೆ ಎಂಬ ಬಗ್ಗೆ ಅನೇಕರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಇದು ವದಂತಿ ಎಂದು ಇಬ್ಬರು ಸ್ಪಷ್ಟಣೆ ನೀಡಿದ್ದಾರೆ. ವಿವಾಹದ ವದಂತಿಯ ನಡುವೆ ಟೆನ್ನಿಸ್ ಆಟಗಾರ್ತಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲೂ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಹೌದು. . ಸಾನಿಯಾ ಟೆನ್ನಿಸ್ ತರಬೇತಿ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದಾರೆ. ಈಕೆಯ ಟೆನ್ನಿಸ್ ಅಕಾಡೆಮಿ 2013ರಿಂದ ಪ್ರಾರಂಭವಾಗಿ ಅದರ ಮೂಲಕ ತರಬೇತಿಯನ್ನು ನೀಡುತ್ತಾ ಬಂದಿದೆ. ಇದೀಗ ಅಕಾಡೆಮಿಯಲ್ಲಿ ಮುಂದಿನ ತಿಂಗಳು ಸೆಪ್ಟೆಂಬರ್ 9ರಿಂದ 13ರವರೆಗೆ ಐದು ದಿನಗಳ ತರಬೇತಿ ನಡೆಯಲಿದೆ ಎಂದು ಹೇಳಿದ್ದಾರೆ. ಜೊತೆಗೆ 12ರಿಂದ 18 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ಬುಕ್ಕಿಂಗ್ಗಾಗಿ ಮತ್ತು ಖಚಿತಪಡಿಸಲು ವಾಟ್ಸ್ಆ್ಯಪ್ ಮೂಲಕ +91 8121594618ಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

