ಪ್ಯಾರಿಸ್ : ಪ್ಯಾರಾಲಿಂಪಿಕ್ಸ್ನ ಮೂರನೇ ದಿನ ಭಾರತಕ್ಕೆ ಐದನೇ ದಿನ ಲಭಿಸಿದೆ. ಕ್ರೀಡಾಕೂಟದ ಎರಡನೇ ದಿನ 1 ಚಿನ್ನ ಸೇರಿದಂತೆ 4 ಪದಕ ಗೆದ್ದಿದ್ದ ಭಾರತಕ್ಕೆ ಮೂರನೇ ದಿನ ಒಂದು ಕಂಚಿನ ಪದಕ ಸಿಕ್ಕಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಹೆಚ್ 1 ಫೈನಲ್ನಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ 211.1 ಅಂಕ ಸಂಪಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.ಎಂಟು ಮಹಿಳೆಯರ ನಡುವೆ ನಡೆದ ಈ ಫೈನಲ್ ಸುತ್ತಿನಲ್ಲಿ ರುಬಿನಾ ಬೆಳ್ಳಿ ಪದಕದ ರೇಸ್ನಲ್ಲಿದ್ದರು. ಆದರೆ ಕೊನೆಯ ಎರಡು ಶಾಟ್ಗಳಲ್ಲಿ ಲಯ ಕಳೆದುಕೊಂಡ ಅವರು ಒಟ್ಟು 211.1 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಮೊನ್ನೆ ನಡೆದ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು.

Image: Web
