ಮುಂಬೈ: ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮುಕ್ತಾಯ ಹಂತಕ್ಕೆ ಬಂದಿದೆ. ಈ ಬೆನ್ನಲ್ಲೇ 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಈಗಾಗಲೇ ಶ್ರೀಲಂಕಾ ವಿರುದ್ಧದ ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಅನೌನ್ಸ್ ಆಗಿದೆ.

ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ, ರೋಹಿತ್​ 20 ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಅಷ್ಟೇ ಅಲ್ಲದೇ ಶ್ರೀಲಂಕಾ ಪ್ರವಾಸದಿಂದ ರೆಸ್ಟ್​ ಕೂಡ ಕೇಳಿದ್ದರು. ಬಿಸಿಸಿಐ ಕೊಹ್ಲಿ, ರೋಹಿತ್​​ ಮತ್ತು ಬುಮ್ರಾಗೆ ರೆಸ್ಟ್​ ನೀಡಿತ್ತು.

ಗಂಭೀರ್​ ಕೋಚ್​ ಆದ ಬಳಿಕ ಇದು ಮೊದಲ ಸರಣಿ ಆಗಿದ್ದು, ಮೂವರು ಸ್ಟಾರ್​ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಸೀರೀಸ್​ ಆಡಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ವಿರಾಟ್​ ಕೊಹ್ಲಿ, ರೋಹಿತ್​​ ಸಮ್ಮತಿಸಿದ್ದು, ಈಗ ತಂಡಕ್ಕೆ ವಾಪಸ್ಸಾಗಿದ್ದಾರೆ. ಇದು ವಿರಾಟ್​ ಕೊಹ್ಲಿ, ರೋಹಿತ್​ ಫಾ ನ್ಸ್‌ ಗ್‌  ಸಖತ್‌ ಖುಷಿ ಕೊಟ್ಟಿದೆ. ಇನ್ನು, ಮುಂಬೈ ಏರ್ಪೋರ್ಟ್​​ನಿಂದ ನೇರ ಶ್ರೀಲಂಕಾಗೆ ಬಂದು ಕ್ಯಾಪ್ಟನ್​ ರೋಹಿತ್​ ಶರ್ಮಾ, ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಲ್ಯಾಂಡ್​​​​​ ಆಗಿದ್ದಾರೆ. ಶ್ರೀಲಂಕಾ ವಿರುದ್ಧ ಸರಣಿಗಾಗಿ ಈಗಾಗಲೇ ನೆಟ್​ನಲ್ಲಿ ಪ್ರಾಕ್ಟೀಸ್​ ಶುರು ಮಾಡಿದ್ದಾರೆ. ಕೊಹ್ಲಿ, ರೋಹಿತ್​ ನೆಟ್​ನಲ್ಲಿ ಪ್ರಾಕ್ಟೀಸ್​ ಮಾಡುತ್ತಿರೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.