Categories: ಕ್ರೀಡೆ

ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ ಕನ್ನಡಿಗ ರೋಹನ್ ಬೋಪಣ್ಣ ಜೋಡಿ

ಮೆಲ್ಬೋರ್ನ್: ಎರಡನೇ ಶ್ರೇಯಾಂಕಿತ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಆತಿಥೇಯ ದೇಶದ ಮ್ಯಾಥ್ಯೂ ಎಬ್ಡೆನ್ ಜೋಡಿ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಗೆ ಕಾಲಿಟ್ಟಿದ್ದಾರೆ.

ರೋಹನ್ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ ಸತತ ಎರಡನೇ ಗ್ರಾಂಡ್ ಸ್ಲಾಂನಲ್ಲಿ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದೆ. ಗುರುವಾರ ನಡೆದ ಸೆಮಿೈನಲ್‌ನಲ್ಲಿ ಬೋಪಣ್ಣ- ಎಬ್ಡೆನ್ ಜೋಡಿ 6-3, 3-6, 7-6 (10-7) ಸೆಟ್‌ಗಳಿಂದ ಶ್ರೇಯಾಂಕ ರಹಿತ ತೋಮಸ್ ಮಚಾಕ್-ಜಾಂಗ್ ಝಿಜೆನ್ ಜೋಡಿ ಎದುರು ಗೆದ್ದಿದೆ.   ಇಂಡೋ-ಆಸೀಸ್ ಜೋಡಿ ಮೂರನೇ ಸೆಟ್‌ನಲ್ಲಿ ತೀವ್ರ ಪ್ರತಿರೋಧ ಎದುರಿಸಿತು. ಅಂತಿಮವಾಗಿ ಟೈ ಬ್ರೇಕರ್‌ಗೆ ಸಾಗಿದ ಸೆಟ್‌ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಮೇಲುಗೈ ಸಾಧಿಸಿತು. ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಪ್ರಶಸ್ತಿ ಸುತ್ತಿನಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ- ಆಂಡ್ರಿಯಾ ವವಾಸ್ಸೋರಿ ವಿರುದ್ಧ ಶನಿವಾರ ಆಡಲಿದೆ.

Ashitha S

Recent Posts

ಮದುವೆ ರದ್ದು, ಕೋಪದಿಂದ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರೇಮಿ

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.

15 mins ago

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

40 mins ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

60 mins ago

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

9 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

9 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

9 hours ago