ಮೆಲ್ಬೋರ್ನ್: ಎರಡನೇ ಶ್ರೇಯಾಂಕಿತ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಆತಿಥೇಯ ದೇಶದ ಮ್ಯಾಥ್ಯೂ ಎಬ್ಡೆನ್ ಜೋಡಿ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಗೆ ಕಾಲಿಟ್ಟಿದ್ದಾರೆ.
ರೋಹನ್ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ ಸತತ ಎರಡನೇ ಗ್ರಾಂಡ್ ಸ್ಲಾಂನಲ್ಲಿ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದೆ. ಗುರುವಾರ ನಡೆದ ಸೆಮಿೈನಲ್ನಲ್ಲಿ ಬೋಪಣ್ಣ- ಎಬ್ಡೆನ್ ಜೋಡಿ 6-3, 3-6, 7-6 (10-7) ಸೆಟ್ಗಳಿಂದ ಶ್ರೇಯಾಂಕ ರಹಿತ ತೋಮಸ್ ಮಚಾಕ್-ಜಾಂಗ್ ಝಿಜೆನ್ ಜೋಡಿ ಎದುರು ಗೆದ್ದಿದೆ. ಇಂಡೋ-ಆಸೀಸ್ ಜೋಡಿ ಮೂರನೇ ಸೆಟ್ನಲ್ಲಿ ತೀವ್ರ ಪ್ರತಿರೋಧ ಎದುರಿಸಿತು. ಅಂತಿಮವಾಗಿ ಟೈ ಬ್ರೇಕರ್ಗೆ ಸಾಗಿದ ಸೆಟ್ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಮೇಲುಗೈ ಸಾಧಿಸಿತು. ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಪ್ರಶಸ್ತಿ ಸುತ್ತಿನಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ- ಆಂಡ್ರಿಯಾ ವವಾಸ್ಸೋರಿ ವಿರುದ್ಧ ಶನಿವಾರ ಆಡಲಿದೆ.