ಗುವಾಹಟಿ: ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್‌ ವಿಳಂಬವಾಗಿದೆ.

ಟಾಸ್‌ಗೂ ಮುನ್ನ ಸ್ವಲ್ಪ ಮಳೆಯಾಗಿದ್ದು, ಪಿಚ್‌ನಲ್ಲಿ ಕವರ್‌ನಿಂದ ಮುಚ್ಚಲಾಗಿದೆ. ಹಗುರವಾಗಿ ಆರಂಭವಾಗಿದ್ದ ಮಳೆ ಇದೀಗ ಜೋರಾಗಿದೆ. ಈವರೆಗೂ ಆರ್‌ಸಿಬಿ ಎರಡು ಪಂದ್ಯಗಳನ್ನಾಡಿದ್ದು, ಆ ಪೈಕಿ ಎರಡಲ್ಲೂ ಗೆಲುವು ಸಾಧಿಸಿದೆ. ಇನ್ನೂ ಆರ್‌ಆರ್‌ ಮೂರು ಪಂದ್ಯಗಳನ್ನಾಡಿದ್ದು, ಹ್ಯಾಟ್ರಿಕ್‌ ಗೆಲುವನ್ನು ಕಂಡಿದೆ.