ಬೆಂಗಳೂರು: ಎಂ.ಎ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಗ್ ಟಾರ್ಗೆಟ್ ಕೊಟ್ಟಿದೆ.
ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಪೇರಿಸಿ 183 ರನ್ಗಳ ಗುರಿ ನೀಡಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ಮೊದಲಿಗೆ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಹರ್ಷಿತ್ ರಾಣಾ 2ನೇ ಓವರಿನ 5ನೇ ಬಾಲ್ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ್ರು. ಇದಾದ ಬೆನ್ನಲ್ಲೇ ಕೊನೇ ಬಾಲ್ಗೆ ಸಿಕ್ಸರ್ ಬಾರಿಸಲು ಹೋದ ಫಾಫ್ ಕ್ಯಾಚ್ ನೀಡಿದ್ರು. ಬಳಿಕ ಕ್ಯಾಮೆರಾನ್ ಗ್ರೀನ್ ಕೂಡ 2 ಸಿಕ್ಸರ್, 4 ಫೋರ್ ಸಮೇತ 33 ರನ್ ಗಳಿಸಿದ್ರು.
ಕ್ಯಾಮರಾನ್ ಗ್ರೀನ್ ಔಟಾದ ಬಳಿಕ ಬಂದ ಮ್ಯಾಕ್ಸಿ ಎಂದಿನಂತೆಯೇ ಬ್ಯಾಟ್ ಬೀಸಿದ್ರು. ಕೇವಲ 19 ಬಾಲ್ನಲ್ಲಿ 1 ಸಿಕ್ಸರ್, 3 ಫೋರ್ ಸಮೇತ 29 ರನ್ ಸಿಡಿಸಿದ್ರು.
ಓಪನರ್ ಆಗಿ ಬಂದ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿದರು. ಕೇವಲ 59 ಬಾಲ್ನಲ್ಲಿ 4 ಸಿಕ್ಸರ್, 4 ಫೋರ್ ಸಮೇತ 83 ರನ್ ಸಿಡಿಸಿದ್ರು.
ಕೊನೆಗೆ ಸುನಿಲ್ ನರೈನ್ ಬೌಲಿಂಗ್ನಲ್ಲಿ 14ನೇ ಓವರ್ನಲ್ಲಿ ಮತ್ತೆ ಸಿಕ್ಸ್ ಸಿಡಿಯಲು ಹೋದ ಮ್ಯಾಕ್ಸಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದ್ರು. ಕೊನೆಗೆ ಬಂದ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಮೂರು ಸಿಕ್ಸರ್ ಸಮೇತ ದಿನೇಶ್ ಕಾರ್ತಿಕ್ 20 ರನ್ ಸಿಡಿಸಿದ್ರು.