ಬೆಂಗಳೂರು: ಸತತ ಸೋಲುಗಳಿಂದ ಕೆಂಗಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಸೀಸನ್-18ಕ್ಕೆ ತಯಾರಿ ನಡೆಸುತ್ತಿದೆ. ಹೊಸ ಸೀಸನ್ಗೆ ತಯಾರಿ ನಡೆಸ್ತಿರುವ ರೆಡ್ ಆರ್ಮಿ, ಹೊಸ ಅಧ್ಯಾಯಕ್ಕೂ ನಾಂದಿ ಹಾಡುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗೇ ಹೊಸ ಕಾಪ್ಟನ್ ಮೇಲೆ ಕಣ್ಣಿಟ್ಟಿದೆ.
ಫಾಫ್ ಡುಪ್ಲೆಸಿಗೆ ಕೊಕ್ ನೀಡುವ ನಿರ್ಧಾರ ಮಾಡಿರುವ ಫ್ರಾಂಚೈಸಿ, ಈಗ ಹೊಸ ವಿನ್ನಿಂಗ್ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಇದಕ್ಕಾಗಿ ಈಗಾಗಲೇ ಲಿಸ್ಟ್ ಕೂಡ ಮಾಡಿರುವ ರೆಡ್ ಆರ್ಮಿ, ನಾಯಕತ್ವಕ್ಕೆ ಸೂಕ್ತ ಐದು ಅಭ್ಯರ್ಥಿಗಳಿಗೆ ಗಾಳ ಹಾಕುವ ಮೆಗಾ ಪ್ಲಾನ್ನಲ್ಲಿ ಮಾಡಿದೆ.
ಡುಪ್ಲೆಸಿ ಬದಲು ಕನ್ನಡಿಗ ಕೆ.ಎಲ್.ರಾಹುಲ್ಗೆ ಮಣೆ ಹಾಕೋ ಪ್ಲಾನ್ ತಂಡದಲ್ಲಿ ನಡೆದಿದೆ. ಫ್ಯಾನ್ಸ್ ಒತ್ತಾಯವೂ ಇದೇ ಆಗಿದೆ. ಮೂಲಗಳ ಪ್ರಕಾರ ಮೆಗಾ ಹರಾಜಿನಲ್ಲಿ ರಾಹುಲ್ನ ಬಿಡ್ ಮಾಡಲು 25 ಕೋಟಿ ಪಕ್ಕಕ್ಕಿಟ್ಟಿದೆ ಎನ್ನಲಾಗಿದೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗುವುದಾದರೇ, ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಮೇಲೆ ಕಣ್ಣಿಟ್ಟಿದೆ ನಿಜ. ಆದ್ರೆ, ಮೆಗಾ ಹರಾಜಿನಲ್ಲಿ ಇವರು ಸಿಗಲಿಲ್ಲ ಅಂದ್ರೆ, ಆರ್ಸಿಬಿ ವಿರಾಟ್ ಕೊಹ್ಲಿಯನ್ನೇ ನಾಯಕನಾಗಿ ನೇಮಿಸುವ ಧೃಡ ನಿರ್ಧಾರ ಕೈಗೊಂಡರು ಅಚ್ಚರಿ ಇಲ್ಲ.

