ಪ್ಯಾರಿಸ್​: ಶೂಟಿಂಗ್​ನಲ್ಲಿ ಭಾರತ ಸದ್ಯ 2 ಪದಕಗಳ ನಿರೀಕ್ಷೆಯಲ್ಲಿದೆ. ಇಂದು ನಡೆದ 10 ಮೀಟರ್ ಮಹಿಳಾ ಏರ್ ರೈಫಲ್ ಸ್ಪರ್ಧೆಯಲ್ಲಿ ಶೂಟರ್ ರಮಿತಾ ಜಿಂದಾಲ್ 631.5 ಅಂಕ ಗಳಿಸಿ 5 ನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಅನುಭವಿ ಶೂಟರ್​ ಎಲವೆನಿಲ್ ವಲರಿವನ್  630.7 ಅಂಕ ಗಳಿಸಿ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 8 ಮಂದಿಗೆ ಫೈನಲ್​ ಪ್ರವೇಶ ಲಭಿಸಿತು. ಇಂದು ನಡೆಯುವ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್‌ನಲ್ಲಿ ಭಾರತದ ಚೊಚ್ಚಲ ಪದಕದ ಗುರಿಯೊಂದಿಗೆ ಮನು ಭಾಕರ್​ ಕಣಕ್ಕಿಳಿಯಲಿದ್ದಾರೆ.ರಮಿತಾ ತನ್ನ ಕೋಚ್ ಸುಮಾ ಶಿರೂರ್ (ಅಥೆನ್ಸ್ 2004) ನಂತರ ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ರೈಫಲ್ ಶೂಟರ್ ಆಗಿದ್ದಾರೆ.