ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆ ಮೊದಲ ಬಾರಿಗೆ ಆಯೋಜಿಸಿದ್ದ ಕ್ವೀನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಿತು.‌ ನಟಿ ಧನ್ಯಾ ರಾಮ್‌ಕುಮಾರ್ ನಾಯಕತ್ವದ ಕೋಲಾರ ಕ್ವೀನ್ಸ್ ಟೀಮ್ QPL ಕಪ್ ನ್ನು ಮುಡಿಗೇರಿಸಿಕೊಂಡಿತು.

ಕೋಲಾರ ತಂಡವು 5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 88 ರನ್ ಗಳಿಸಿದರು. ಈ ಮೊತ್ತಕ್ಕೆ ಉತ್ತರವಾಗಿ ಬೆಂಗಳೂರು ತಂಡವು ಐದು ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 53 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. ಕೋಲಾರ ಕ್ಲೀನ್ಸ್ ತಂಡವು ಆಕರ್ಷಕ ಟ್ರೋಫಿಯೊಂದಿಗೆ 6 ಲಕ್ಷ ಬಹುಮಾನವನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಬೆಂಗಳೂರು ಕ್ಲೀನ್ಸ್ ತಂಡವು 3 ಲಕ್ಷ ಬಹುಮಾನ ಪಡೆಯಿತು.

ಕೋಲಾರ ಕ್ವೀನ್ಸ್ ತಂಡದ ಆಟಗಾರ್ತಿ ಹೇಮಾ ಟೂರ್ನಿಯ ಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರೆ, ಬೆಂಗಳೂರು ಕ್ವೀನ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಬೆಳಗಾವಿ ಕ್ವೀನ್ಸ್ ನ ಕವಿತಾ ಗೌಡ ಅತ್ಯುತ್ತಮ ಬ್ಯಾಟ್ಸ್ ಮೆನ್ ಸ್ಥಾನ ಪಡೆದರೆ ಬೆಂಗಳೂರು ಕ್ವೀನ್ಸ್ ನ ಅನುಪಮಾ ಗೌಡ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಸರಣಿ ಆಟಗಾರ ಪ್ರಶಸ್ತಿಯನ್ನು ಕೋಲಾರ ಟೀಂನ ಹೇಮಾ ತಿಮ್ಮಯ್ಯ ಪಡೆದುಕೊಂಡರೆ, ಗ್ರೀಷ್ಮಾ ಗೌಡ ಪಂದ್ಯದ ಅಂತಿಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.