ಪುಣೆ: ಪ್ರೊ ಕಬಡ್ಡಿಯಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 40-37 ಅಂತರದಲ್ಲಿ ಯು ಮುಂಬಾ ಗೆಲುವು ಸಾಧಿಸಿದೆ. ಮುಂಬಾದ ಈ ಗೆಲುವಿನಲ್ಲಿ ರೈಡರ್ ಆಶಿಷ್ ತಂದಿತ್ತ 12 ಅಂಕ, ಪ್ರಣಯ್ ರಾಯ್ 6 ಅಂಕ ಗಳಿಸಿದರು.
ತೆಲುಗು ಟೈಟಾನ್ಸ್ ಪರ ಸಿದ್ಧಾರ್ಥ ದೇಸಾಯಿ 18, ಪರ್ವೇಶ್ 8 ಅಂಕ ಗಳಿಸಿದರು. ಪಂದ್ಯದ ಮೊದಲ 5 ನಿಮಿಷದಲ್ಲೇ ಮುಂಬಾ ಮುನ್ನಡೆ ಸಾಧಿಸಿತು.
ಬೆಂಗಾಲ್ ವಾರಿಯರ್-ತಮಿಳ್ ತಲೈವಾಸ್ ನಡುವಿನ ರೋಚಕ ಹಣಾಹಣಿ 41-41ರಿಂದ ಟೈ ಆಯಿತು.