News Karnataka Kannada
Monday, April 29 2024
ಕ್ರೀಡೆ

ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ

Pro Kabaddi League 10th edition schedule announced
Photo Credit : News Kannada

ಬೆಂಗಳೂರು: ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಡಿಸೆಂಬರ್​ 2ರಂದು ಅಹಮದಾಬಾದ್​ನ ಅರೆನಾ ಬೈ ಟ್ರಾನ್ಸ್​ಸ್ಟೇಡಿಯಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಗುಜರಾತ್​ ಜೈಂಟ್ಸ್​ & ತೆಲುಗು ಟೈಟಾನ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಬೆಂಗಳೂರು ಬುಲ್ಸ್​ ತಂಡ ಡಿ.3ರಂದು ಗುಜರಾತ್​ ಜೈಂಟ್ಸ್​ ಎದುರು ಅಭಿಯಾನ ಆರಂಭಿಸಲಿದೆ.

ಡಿಸೆಂಬರ್​ 7ರವರೆಗೆ ಅಹಮದಾಬಾದ್​ ಚರಣ ನಡೆಯಲಿದೆ. ಬಳಿಕ ಬೆಂಗಳೂರು (ಡಿ.8-13), ಪುಣೆ (ಡಿ.15-20), ಚೆನ್ನೈ (ಡಿ.22-27), ನೋಯ್ಡಾ (ಡಿ.29-ಜ.3), ಮುಂಬೈ (ಜ.5-10), ಜೈಪುರ (ಜ.12-17), ಹೈದರಾಬಾದ್​ (ಜ.19-24), ಪಟನಾ (ಜ.26-31), ದೆಹಲಿ (ಫೆ.2-7), ಕೋಲ್ಕತ (ಫೆ.9-14), ಪಂಚಕುಲ (ಫೆ.16-21) ಚರಣದ ಪಂದ್ಯಗಳು ನಡೆಯಲಿವೆ. ಸ್ಟಾರ್​ ಸ್ಪೋರ್ಟ್ಸ್​, ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಎಲ್ಲ ಪಂದ್ಯಗಳು ನೇರಪ್ರಸಾರ ಕಾಣಲಿವೆ. ಪ್ರತಿ ದಿನದ ಮೊದಲ ಪಂದ್ಯ ರಾತ್ರಿ 8 ಮತ್ತು 2ನೇ ಪಂದ್ಯ ರಾತ್ರಿ 9ರಿಂದ ನಡೆಯಲಿದೆ.

ಡಿ.8-13 ಬೆಂಗಳೂರು ಪಂದ್ಯಗಳು: ಅಹಮದಾಬಾದ್​ನಲ್ಲಿ ಟೂರ್ನಿಗೆ ಚಾಲನೆ ದೊರೆತ ಬೆನ್ನಲ್ಲೇ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್​ 8ರಿಂದ 13ರವರೆಗೆ 2ನೇ ಚರಣದ ಪಂದ್ಯಗಳು ನಡೆಯಲಿವೆ. ಬೆಂಗಳೂರು ಬುಲ್ಸ್ ​& ದೆಹಲಿ ನಡುವೆ ಬೆಂಗಳೂರು ಚರಣದ ಮೊದಲ ಪಂದ್ಯ ನಡೆಯಲಿದೆ. ಈ ಪೈಕಿ ಡಿಸೆಂಬರ್​ 12ರಂದು ಮಾತ್ರ ಒಂದೇ ಪಂದ್ಯ ನಡೆಯಲಿದ್ದರೆ, ಉಳಿದ ದಿನಗಳಲ್ಲಿ ತಲಾ 2 ಪಂದ್ಯಗಳು ನಡೆಯಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು