ವೆಸ್ಟ್​ ವಿಂಡೀಸ್​ ವಿಕೆಟ್ ಕೀಪರ್ ಮತ್ತು ಗೇಮ್ ಚೇಂಜರ್​ ಬ್ಯಾಟರ್​​ ನಿಕೋಲಸ್ ಪೂರನ್ ಕ್ರಿಕೆಟ್ ಲೋಕಕ್ಕೆ ಶಾಕ್ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್​ ನಿವೃತ್ತಿ ಘೋಷಣೆ ಬೆನ್ನಲ್ಲೇ ಪೂರನ್ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ.

ಇನ್ಮುಂದೆ ಪೂರನ್ ಐಪಿಎಲ್ ಸೇರಿದಂತೆ ಫ್ರಾಂಚೈಸಿ ಕ್ರಿಕೆಟ್​ ಲೀಗ್​​ನಲ್ಲಿ ಮಾತ್ರ ಆಡಲಿದ್ದಾರೆ. ಪ್ರಸ್ತುತ ಐಪಿಎಲ್​​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ಪರ ಬ್ಯಾಟ್ ಆಡುತ್ತಿದ್ದಾರೆ. 61 ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರುವ ಪೂರನ್, 99.5 ಸ್ಟ್ರೈಕ್​ರೇಟ್​ನೊಂದಿಗೆ 1983 ರನ್​ಗಳಿಸಿದ್ದಾರೆ.

ಒಟ್ಟು 58 ಇನ್ನಿಂಗ್ಸ್ ಆಡಿ ಮೂರು ಶತಕ ಮತ್ತು 11 ಅರ್ಧ ಶತಕ ಬಾರಿಸಿದ್ದಾರೆ. ಟಿ-20 ಕ್ರಿಕೆಟ್​ನಲ್ಲಿ 106 ಮ್ಯಾಚ್​ಗಳನ್ನಾಡಿ 136.39 ಸ್ಟ್ರೈಕ್​ರೇಟ್​ನೊಂದಿಗೆ 2275 ರನ್​ಗಳಿಸಿದ್ದಾರೆ. ಆಗಾಗ ಬೌಲಿಂಗ್ ಮಾಡ್ತಿದ್ದ ಪೂರನ್, 6 ವಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಸಿಕ್ಸರ್​​ಗಳ ಬಾರಿಸೋದ್ರಲ್ಲಿ ಪಂಟರ್ ಆಗಿರುವ 29 ವರ್ಷದ ಪೂರನ್​​ ಅವರ ಸೊಗಸಾದ ಆಟಗಳನ್ನು ಐಪಿಎಲ್​​​​ನಲ್ಲಿ ಕಣ್ತುಂಬಿಕೊಳ್ಳಬಹುದು.