ಪ್ಯಾರಿಸ್: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ವಿಭಾಗದಲ್ಲಿ ಅವನಿ ಲೇಖರಾ ಇತಿಹಾಸ ಸೃಷ್ಟಿಸಿದ್ದು, 249.7 ಅಂಕ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಅಂದ್ಹಾಗೆ, ಮಹಿಳಾ ಡಿಸ್ಕಸ್ ಥ್ರೋನಲ್ಲಿ ಕರಮ್ಜ್ಯೋತಿ ದಲಾಲ್ ಮತ್ತು ಸಾಕ್ಷಿ ಕಸನಾ, ಮಹಿಳೆಯರ 100 ಮೀಟರ್ ಓಟದಲ್ಲಿ ಪ್ರೀತಿ ಪಾಲ್ ಮತ್ತು ಪುರುಷರ ಶಾಟ್ ಪುಟ್ನಲ್ಲಿ ಮನು ಎಂಬ ಮೂರು ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದ ಭರವಸೆ ನೀಡಿದ್ದಾರೆ.