ಮುಂಬೈ : ಜಿಯೋಸಿನಿಮಾದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​​ ಪೂರ್ಣ ಉಚಿತವಾಗಿ ನೇರಪ್ರಸಾರ ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರನಾಗಿರುವ ವಯಾಕಾಮ್​ 18, ಭಾರತದಲ್ಲಿ 20 ಏಕಕಾಲಿಕ ಫೀಡ್‌ಗಳ ಒಲಿಂಪಿಕ್ಸ್ ಕ್ರೀಡಾಕೂಟದ ನೇರ ಪ್ರಸಾರ ಮಾಡಲಿದೆ.

ಜುಲೈ 26ರಂದು ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ಜಿಯೋಸಿನಿಮಾದಲ್ಲಿ 20 ಏಕಕಾಲೀನ ಫೀಡ್‌ಗಳಲ್ಲಿ ಉಚಿತವಾಗಿ ಪ್ರಸಾರವಾಗಲಿದೆ. ಅಭಿಮಾನಿಗಳು ತಮ್ಮ ಆದ್ಯತೆಯ ಸ್ಪರ್ಧೆ ಮತ್ತು ಭಾರತೀಯರ ಪ್ರದರ್ಶನಗಳನ್ನು ತಮ್ಮ ಅನುಕೂಲಕರ ರೀತಿಯಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ವೀಕ್ಷಿಸಲು ಸಾಧ್ಯವಿದೆ.

ಇದು 17 ಕ್ರೀಡಾವಾರು ಫೀಡ್‌ಗಳನ್ನು ಮತ್ತು ಮೂರು ಕ್ಯುರೇಟೆಡ್ ಫೀಡ್‌ಗಳನ್ನು ಹೊಂದಿರುತ್ತದೆ. ಎಲ್ಲವೂ 4ಕೆನಲ್ಲಿ ಲಭ್ಯವಿದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ವೀಕ್ಷಕ ವಿವರಣೆಯೊಂದಿಗೆ ಲಭ್ಯವಿರುತ್ತದೆ.

ಇದೇ ಮೊದಲ ಬಾರಿ ಮಹಿಳಾ ಕ್ರೀಡಾಪಟುಗಳ ಫೀಡ್ ಸೃಷ್ಟಿಸಲಾಗಿದೆ. ಕ್ರೀಡಾಕೂಟದಲ್ಲಿ ಮಹಿಳಾ ಒಲಿಂಪಿಯನ್‌ಗಳ ಪ್ರಯಾಣವನ್ನು ಪ್ರತ್ಯೇಕವಾಗಿ ಸೆರೆಹಿಡಿಯಲಾಗಿದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಜಾಗತಿಕ ಕ್ರೀಡಾಕೂಟಗಳ ಫೀಡ್​ಗಳನ್ನು ಒಳಗೊಂಡಿರುತ್ತವೆ.