ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನ ಕ್ರೀಡಾಕೂಟದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಫೈನಲ್ಗೆ ಭಾರತದ ಶೂಟರ್ ಅರ್ಜುನ್ ಬಬುಟಾ ಭಾನುವಾರ ಅರ್ಹತೆ ಗಳಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದ ಅವರು ಪ್ರಶಸ್ತಿ ಸುತ್ತಿಗೆ ಏರಿದ್ದಾರೆ. 25ರ ವರ್ಷದ ಬಬುಟಾ 105.7, 104.9, 105.5, 105.4, 104.0 ಮತ್ತು 104.6 ಅಂಕಗಳೊದಿಗೆ ಒಟ್ಟಾರೆ 630.1 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು.
ಶನಿವಾರ ರಮಿತಾ ಜಿಂದಾಲ್ ಅವರೊಂದಿಗೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನ ಅವಕಾಶ ಕಳೆದುಕೊಂಡ ಅವರು ಸೋಮವಾರ ಎಂಟು ಶೂಟರ್ ಗಳ ಫೈನಲ್ ನಲ್ಲಿ ಮತ್ತೊಂದು ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ.

