ಪ್ಯಾರಿಸ್: ಫ್ರಾನ್ಸ್ ಅಂಗಳದಲ್ಲಿ ಭಾರತದ ಭರ್ಜರಿ ಜೋಡಿಗಳು ಗೆಲುವು ಸಾಧಿಸಿದ್ದಾರೆ. ಪುರುಷರ ಡಬಲ್ಸ್ ಬ್ಯಾಡ್ಮಿಂಟ್ನಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸೈರಾಜ್ ಜೋಡಿ ತಮ್ಮ ಮೊದಲ ಗೆಲುವನ್ನು ಸಾಧಿಸಿದೆ.
ಇಬ್ಬರ ಜೋಡಿಯ ಅಬ್ಬರದ ಆಟದ ಮುಂದೆ ಫ್ರಾನ್ಸ್ನ ಲುಕಾಸ್ ಕೋರ್ವಿ ಹಾಗೂ ರೋನನ್ ಲಾಬರ್ ಮಂಡಿಯೂರಿದ್ದಾರೆ. ಒಟ್ಟು 48 ನಿಮಿಷಗಳ ಕಾಲ ಸೆಣೆಸಾಡಿದ ಈ ಜೋಡಿ 21-17, 21-14 ಅಂತರದಲ್ಲಿ ಗೆಲುವು ಸಾಧಿಸಿದೆ.
ಆರಂಭದಲ್ಲಿ ಫ್ರೆಂಚ್ ಜೋಡಿ ಭಾರತದ ಚಿರಾಗ್ ಹಾಗೂ ಸಾತ್ವಿಕ್ ವಿರುದ್ಧ ಹಿಡಿತ ಸಾಧಿಸಿದ್ದರಾದರೂ ಕೂಡ ಮುಂದೆ ಪುಟಿದೆದ್ದ ಚಿರಾಗ್ ಹಾಗೂ ಸಾತ್ವಿಕ್ ಒಂದೇ ಒಂದು ಪಾಯಿಂಟ್ಸ್ ಬಿಡದ ಹಾಗೆ ಅವರನ್ನು ಎದುರಿಸಿದರು. ಇಬ್ಬರ ಅಬ್ಬರದ ಮುಂದೆ ಫ್ರಾನ್ಸ್ ಜೋಡಿ ಕೊನೆಗೂ ಸೋಲೊಪ್ಪಿಕೊಂಡಿತು. ಒಂದು ಹಂತದಲ್ಲಿ ನಿರೀಕ್ಷೆಯಂತೆ ಶೆಟ್ಟಿ ಮತ್ತು ರೆಡ್ಡಿ ಜೋಡಿ ಬ್ಯಾಡ್ಮಿಂಟ್ನಲ್ಲಿ ಶುಭಾರಂಭ ಮಾಡಿದೆ.

