ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ನಾಲ್ಕನೇ ದಿನ ಅಂದರೆ ಸೆಪ್ಟೆಂಬರ್ 1 ರಂದೂ ಕೂಡ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭಾರತೀಯ ಅಥ್ಲೀಟ್‌ಗಳು ತಮ್ಮ ಶಕ್ತಿ ಪ್ರದರ್ಶಿಸಿ ದೇಶಕ್ಕೆ ಆರನೇ ಪದಕವನ್ನು ಗೆದ್ದಿದ್ದಾರೆ.

ಭಾರತದ ಮಹಿಳಾ ಅಥ್ಲೀಟ್ ಪ್ರೀತಿ ಪಾಲ್ ಮಹಿಳೆಯರ 200 ಮೀಟರ್ ಓಟದ (ಟಿ35) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದು, ಪ್ರೀತಿಪಾಲ್ 30.01 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು. ಹಾಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರೀತಿಗೆ ಇದು ಎರಡನೇ ಕಂಚಿನ ಪದಕವಾಗಿದೆ.

ಹೈಜಂಪ್ ನಲ್ಲಿ ನಿಷಾದ್ ಕುಮಾರ್ ಗೆ ಬೆಳ್ಳಿ

ಭಾರತದ ನಿಶಾದ್ ಕುಮಾರ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ಹೈ ಜಂಪ್ T47 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದಿದ್ದು, ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಎರಡನೇ ಸ್ಥಾನ ಗಳಿಸಿದ್ದ ನಿಶಾದ್ ಅವರು ಹಾಲಿ ಋತುವಿನಲ್ಲಿ 2.04 ಮೀ.ದೂರಕ್ಕೆ ಜಿಗಿಯುವ ಮೂಲಕ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಂಡರು. ಅಲ್ಲದೆ 2ನೇ ಸ್ಥಾನಕ್ಕೇರಿ ಬೆಳ್ಳಿ ಪದಕಕ್ಕೆ ಭಾಜನರಾದರು.

Women’s 200 m – T35 Final

After winning her first medal at the #ParisParalympics2024, Preeti Pal secures yet another medal for India, clinching a #Bronze medal🥉 with a personal best timing of 30.01 seconds.

With this win, she becomes the first track and field… pic.twitter.com/UjhYMFRj6T

— SAI Media (@Media_SAI) September 1, 2024