ಮುಂಬೈ: ಟಿ20 ವಿಶ್ವಕಪ್ ಚಾಂಪಿಯನ್ ಮತ್ತು ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ವಯಸ್ಸಿನ ವಿಚಾರದಲ್ಲಿ ಪಂತ್ ಬಿಸಿಸಿಐಗೆ ಮೋಸ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಸಿಸಿಐಗೆ ಪಂತ್ ಮೋಸ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಬಿಸಿಸಿಐ ಮುಂದೆ ಪಂತ್ ತನಗೆ ಕೇವಲ 26 ವರ್ಷ ಎಂದು ಹೇಳಿಕೊಂಡಿದ್ದಾರೆ. ಶಾಲೆಯಲ್ಲಿ ಪಂತ್ ನನಗಿಂತಲೂ 3 ವರ್ಷ ಸೀನಿಯರ್. ನನಗೆ 27 ವರ್ಷ, 30 ವರ್ಷ ಇರಬೇಕಾದ ಪಂತ್ಗೆ 26 ವಯಸ್ಸು ಆಗಿರಲು ಹೇಗೆ ಸಾಧ್ಯ? ಎಂದು ನೆಟ್ಟಿಗರು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪಂತ್ ಬಿಸಿಸಿಐಗೆ ಮೋಸ ಮಾಡಿದ್ದು, ಈ ವಿಚಾರ ತನಿಖೆ ಆಗಲೇಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.
ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಈ ಬೆನ್ನಲ್ಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ವಿದಾಯ ಹೇಳಿದ್ದಾರೆ.

