ಮುಂಬೈ: ಜೂನ್ 27ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯಿಂದ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಬುಮ್ರಾಗೆ ರೆಸ್ಟ್ ನೀಡಲಾಗಿದೆ.
ಹಾಗಾಗಿ ರೋಹಿತ್ ಅನುಪಸ್ಥಿತಿಯಲ್ಲಿ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ಕೆ.ಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್ಗೂ ಪ್ರತ್ಯೇಕ ನಾಯಕರನ್ನು ನೇಮಿಸೋ ಪ್ಲಾನ್ ಕೋಚ್ ಗೌತಮ್ ಗಂಭೀರ್ ಅವರದ್ದು.
ಮೊದಲು ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲೂ ಟೀಮ್ ಇಂಡಿಯಾ ಕ್ಯಾಪ್ಟನ್ ಆಗೋ ರೇಸ್ನಲ್ಲಿದ್ದರು ಹಾರ್ದಿಕ್ ಪಾಂಡ್ಯ. ಯಾವಾಗ ಟಿ20 ತಂಡಕ್ಕೆ ಮಾತ್ರ ನೀವು ಕ್ಯಾಪ್ಟನ್, ಏಕದಿನ ಮಾದರಿಯಲ್ಲಿ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸೆಲೆಕ್ಟರ್ಸ್ ಪಾಂಡ್ಯಗೆ ಹೇಳಿದ್ರೋ ಆಗಲೇ ಶುರುವಾಗಿದ್ದು ಸಮಸ್ಯೆ. ಈಗ ಹಾರ್ದಿಕ್ ಪಾಂಡ್ಯ ತನಗೆ ರಾಹುಲ್ ನಾಯಕತ್ವದಲ್ಲಿ ಆಡಲು ಇಷ್ಟವಿಲ್ಲ, ಹಾಗಾಗಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಿ ಎಂದು ಕೇಳಿಕೊಂಡಿದ್ದಾರಂತೆ. ಈ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

