ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ಗೆ ಪ್ಯಾರಿಸ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ವರುಣನ ಆರ್ಭಟದ ನಡುವೆಯು ಫ್ರಾನ್ಸ್ ಯಶಸ್ವಿಯಾಗಿ ಉದ್ಘಾಟನಾ ಸಮಾರಂಭ ನಡೆಸಿದೆ. ಇದೇ ಮೊದಲ ಬಾರಿಗೆ ಮೈದಾನದ ಹೊರಗೆ, ನದಿ ಮೇಲೆ ಉದ್ಘಾಟನೆಗೊಂಡ ಒಲಿಂಪಿಕ್ಸ್ ಕಾರ್ಯಕ್ರಮವಾಗಿದೆ.
ಒಲಿಂಪಿಕ್ಸ್ ಕಾರ್ಯಕ್ರಮ ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಣ್ಣ ಬಣ್ಣದ ಲೈಟ್ಗಳು ಆಕರ್ಷಣೆಯಾಗಿದ್ದವು. ಸ್ಪರ್ಧಿಗಳ ಸಂಭ್ರಮ, ಸಡಗರ.. ಸಿಡಿಮದ್ದುಗಳ ಸದ್ದುಗದ್ದಲ. ಡ್ಯಾನ್ಸ್.. ಖ್ಯಾತ ಸೆಲೆಬ್ರೆಟಿಗಳ ಅಪೂರ್ವ ಸಮಾಗಮ ಸಮಾರಂಭದಲ್ಲಿ ಕಂಡುಬಂದವು.ಪ್ಯಾರಿಸ್ ಒಲಂಪಿಕ್ನ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಸಿಟಿ ಆಫ್ ಲವ್ ಅಂತಾನೇ ಕರೆಯುವ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದ ಸಂಭ್ರಮ ಕಳೆಗಟ್ಟಿತ್ತು.
ಜಗತ್ತಿನ ಅತಿ ದೊಡ್ಡ ಹಾಗೂ ಅದ್ಧೂರಿ ಕ್ರೀಡಾಜಾತ್ರೆ ಒಲಂಪಿಕ್ಸ್‌ಗೆ ನಿನ್ನೆ ವರ್ಣರಂಜಿತ ಚಾಲನೆ ಸಿಕ್ಕಿದೆ.. ಫ್ರಾನ್ಸ್‌ನ ರಾಜಧಾನಿ, ಪ್ರೇಮನಗರಿ ಪ್ಯಾರಿಸ್ ನಗರದಲ್ಲಿ 33ನೇ ಆವೃತ್ತಿಯ ಒಲಿಂಪಿಕ್ಸ್ ಉದ್ಘಾಟನೆಗೊಂಡಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಯಿಂದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಿದೆ. 3ನೇ ಬಾರಿಗೆ ಪ್ಯಾರಿಸ್ ನಗರದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯುತ್ತಿದ್ದು, ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ಆರಂಭೋತ್ಸವ ನಡೆದಿದೆ.

