ಪ್ಯಾರಿಸ್ : ಒಲಂಪಿಕ್ಸ್‌ನ್ಲಲಿ ಪುರುಷರ ಹಾಕಿ ತಂಡ ಕ್ವಾಟರ್ ಫೈನಲ್‌ಗೆ ತಲುಪಿದೆ. ಮಂಗಳವಾರದ ಮುಖಾಮುಖಿಯಲ್ಲಿ ಗ್ರೂಪ್ ‘ಬಿ’ಯಲ್ಲೇ ಅತ್ಯಂತ ದುರ್ಬಲ ಎದುರಾಳಿಯಾಗಿದ್ದ ಐರ್ಲೆಂಡ್ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಭಾರತ ತಂಡ ಮುಂದಿನ ಪಂದ್ಯಗಳಲ್ಲಿ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಬಲಿಷ್ಠ ಬೆಲ್ಜಿಯಂ (ಆ. 1) ಮತ್ತು ಆಸ್ಟ್ರೇಲಿಯ (ಆ. 2) ತಂಡಗಳನ್ನು ಎದುರಿಸಲಿದೆ.ಪ್ರತೀ ವಿಭಾಗದ ಅಗ್ರ 4 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.
ಭಾರತ ತಂಡ ಹಿಂದಿನ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸಿದ್ದು, ಅರ್ಜೆಂಟೀನಾ ವಿರುದ್ಧ 1-1 ಡ್ರಾ ಸಾಧಿಸಿ 7 ಅಂಕ ಗಳಿಸಿದೆ. ನ್ಯೂಜಿಲ್ಯಾಂಡ್ ತಂಡ ಅರ್ಜೆಂಟೀನಾ ವಿರುದ್ಧ 2-0 ಗೋಲುಗಳ ಅಂತರದ ಸೋಲು ಅನುಭವಿಸಿದ್ದೂ ಭಾರತಕ್ಕೆ ಲಾಭವಾಗಿ ಪರಿಣಮಿಸಿತು.

