Bengaluru 24°C
Ad

ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದ ಭಾರತ ತಂಡ

ಮಹಿಳಾ ತಂಡ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಭಾರತದ ಹೆಮ್ಮೆಯನ್ನು ಹೆಚ್ಚಿಸಿದೆ. ಭಾರತ ಮಹಿಳಾ ತಂಡ ಸಂಘಟಿತ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ.

ಚೆನ್ನೈ: ಮಹಿಳಾ ತಂಡ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಭಾರತದ ಹೆಮ್ಮೆಯನ್ನು ಹೆಚ್ಚಿಸಿದೆ. ಭಾರತ ಮಹಿಳಾ ತಂಡ ಸಂಘಟಿತ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿದ್ದ ಭಾರತ ದ್ವಿತೀಯ ದಿನದಾಟದಲ್ಲಿ 78 ರನ್​ ಕಲೆ ಹಾಕಿ ಒಟ್ಟು 6 ವಿಕೆಟ್​ಗೆ 603 ರನ್​ ಬಾರಿಸಿ ಡಿಕ್ಲೇರ್​ ಘೋಷಿಸಿದೆ.

Ad
300x250 2

603 ರನ್ ಗಳಿಸುವ ಮೂಲಕ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಮೊದಲ ದಿನದಾಟಕ್ಕೆ ಅಜೇಯರಾಗಿದ್ದ ನಾಯಕಿ ಹರ್ಮನ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಇಂದು ಆರಂಭಗೊಂಡ ದ್ವಿತೀಯ ದಿನದಾಟದಲ್ಲಿ ಅರ್ಧಶತಕ ಬಾರಿಸಿ ಗಮನಸೆಳೆದರು.

 

Ad
Ad
Nk Channel Final 21 09 2023
Ad