News Karnataka Kannada
Monday, May 06 2024
ಕ್ರೀಡೆ

ನವದೆಹಲಿ: ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಭಾರತದ ಮಹಿಳಾ ಕುಸ್ತಿಪಟು

An Indian woman wrestler who won gold at the Junior World Wrestling Championships
Photo Credit : IANS

ನವದೆಹಲಿ: 53 ಕೆಜಿ ವಿಭಾಗದಲ್ಲಿ ಭಾರತದ ಮಹಿಳಾ ಕುಸ್ತಿಪಟು ಅಂತಿಮ್ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 20 ವರ್ಷದೊಳಗಿನವರ ಏಷ್ಯನ್ ಕಂಚಿನ ಪದಕ ವಿಜೇತ ಕಜಕಿಸ್ತಾನದ ಆಲ್ಟಿನ್ ಶಗಯೇವಾ ವಿರುದ್ಧ ಫೈನಲ್ ನಲ್ಲಿ ಗೆಲುವು ಸಾಧಿಸಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಅಂತಿಮ್ 11-0 ಅಂತರದಲ್ಲಿ ಜರ್ಮನ್ ಕುಸ್ತಿಪಟುವನ್ನು ಸೋಲಿಸಿದರೆ, ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ಎದುರಾಳಿಯ ವಿರುದ್ಧ ‘ಪತನ’ದ ಮೂಲಕ ಗೆಲುವು ಸಾಧಿಸಿದರು. ಸೆಮಿಫೈನಲ್ ನಲ್ಲಿ ಅವರು ಉಕ್ರೇನ್ ಕುಸ್ತಿಪಟುವನ್ನು ಸುಲಭವಾಗಿ ಸೋಲಿಸಿದರು.

ಭಾರತದ ಇಬ್ಬರು ಕುಸ್ತಿಪಟುಗಳು ತಮ್ಮ ಅಂತಿಮ ಬೌಟ್ ಗಳಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಇನ್ನಿಬ್ಬರು ಕಂಚಿನ ಪದಕ ಗೆದ್ದರು. ಈ ಸಾಧನೆಯೊಂದಿಗೆ ಭಾರತೀಯ ಕಿರಿಯರ ಮಹಿಳಾ ತಂಡವು 160 ಅಂಕಗಳೊಂದಿಗೆ ರನ್ನರ್ಸ್ ಅಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಜಪಾನ್ 230 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಯುಎಸ್ಎ 124 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಗ್ರೀಕೋ-ರೋಮನ್ ನಲ್ಲಿ, ಎಲ್ಲಾ ಐದು ಭಾರತೀಯ ಕುಸ್ತಿಪಟುಗಳು ನಿರಾಶೆಗೊಂಡರು. ಉಳಿದ ಐದು ತೂಕದ ವಿಭಾಗಗಳಲ್ಲಿನ ಪಂದ್ಯಗಳು ಶನಿವಾರದ ನಂತರ ನಡೆಯಲಿವೆ.

53 ಕೆ.ಜಿ. ಅಂತಿಮ್ – ಚಿನ್ನ; 62 ಕೆ.ಜಿ. ಸೋನಂ- ಬೆಳ್ಳಿ; 65 ಕೆ.ಜಿ. ಪ್ರಿಯಾಂಕಾ- ಬೆಳ್ಳಿ; 57 ಕೆ.ಜಿ. ಸಿಟೊ – ಕಂಚು; 72 ಕೆಜಿ – ರೀತಿಕಾ – ಕಂಚು ಪದಕ ಗೆದ್ದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು