ನವದೆಹಲಿ : ದೋಹಾ ಡೈಮಂಡ್ ಲೀಗ್ 2025 ರಲ್ಲಿ ನೀರಜ್ ಚೋಪ್ರಾ 90.23 ಮೀಟರ್ ಜಾವೆಲಿನ್ ಎಸೆದು ವೃತ್ತಿಜೀವನದ ಅತ್ಯುತ್ತಮ ದಾಖಲೆ ನಿರ್ಮಿಸಿದ್ದಾರೆ.

90 ಮೀಟರ್ ದಾಟಿದ ಮೂರನೇ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಪ್ರಧಾನಿ ಮೋದಿ ಚೋಪ್ರಾ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸತತ ಪರಿಶ್ರಮ ಹಾಗೂ ಅದ್ಭುತ ಶ್ರದ್ಧೆಯ ಫಲದಿಂದ ನೀರಜ್ ಚೋಪ್ರಾ ಈ ಐತಿಹಾಸಿಕ ಸಾಧನೆ ಮಾಡಿದ್ದು,ಇಡೀ ಭಾರತ ಇದ್ರಿಂದ ಹೆಮ್ಮೆ ಪಡುತ್ತಿದೆ ಎಂದು ಪ್ರಶಂಸೆ ನೀಡಿದ್ದಾರೆ. ನೀರಜ್ ಚೋಪ್ರಾ ತಮ್ಮ ವೃತ್ತಿಜೀವನದ ಅತ್ಯುತ್ತಮ 90.23 ಮೀಟರ್ ಎಸೆದಿರೋದು ನಿಜಕ್ಕೂ ಅವಿಸ್ಮರಣೀಯ. ಅದ್ಭುತ ಆಟಕ್ಕೆ ಎಲ್ಲರೂ ಪುಳಕಿತರಾಗಿದ್ದೀವಿ ಎಂದು ಮೋದಿ ಹೇಳಿದ್ದಾರೆ.

ದೋಹಾ ಡೈಮಂಡ್ ಲೀಗ್ 2025 ರಲ್ಲಿ ನೀರಜ್ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ 91.06 ಮೀ ಎಸೆತದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಗ್ರೆನಾಡಾದ ಪೀಟರ್ ಆಂಡರ್ಸನ್ 85.64 ಮೀಟರ್ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.