ಹಾಸನದ ಈಜು ಸಂಕೀರ್ಣ ದಲ್ಲಿ ನಡೆದ ಮೈಸೂರು ವಿಭಾಗದ ವಿಭಾಗ ಮಟ್ಟದ ಈಜು ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮಂಗಳೂರಿನ ವೀ ಒನ್ ಆಕ್ವಾ ಸೆಂಟರ್ ನ ಈಜು ಪಟುಗಳಾದ ದೇವಿಕಾ ಎಂ 100,200 ಮತ್ತು 400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ, ಸಿದ್ದಿ ಎಸ್ ಶೆಟ್ಟಿ ಇವರು 100 ಮತ್ತು 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ , ರೀಮಾ ಎ ಎಸ್ ಇವರು 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಪ್ರಥಮ ಸ್ಥಾನ ಹಾಗೂ ಪುರುಷರ ವಿಭಾಗದಲ್ಲಿ ಗಗನ್ ಜಿ ಪ್ರಭು ಇವರು 200ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ಗಳಿಸಿದ್ದಾರೆ.
ಅಲ್ಲದೆ ಈ ಮೊದಲು ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ವೀ ವನ್ ಅಕ್ವಾ ಸೆಂಟರ್ ನ ಈಜು ಪಟುಗಳು ಹಲವು ಪದಕಗಳನ್ನು ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದರು.
ವಿಜೇತರ ವಿವರ
ನೈತಿಕ್ ಎನ್ ಎರಡು ಬೆಳ್ಳಿ ಒಂದು ಕಂಚು, ಶ್ರಾವ್ಯ ಕೆ ಒಂದು ಚಿನ್ನ ಮೂರು ಬೆಳ್ಳಿ , ದಿಯಾ ನಾಯಕ್ ಒಂದು ಚಿನ್ನ ಒಂದು ಕಂಚು, ದೇವಿಕಾ ಎಂ ಮೂರು ಚಿನ್ನ, ರೀಮಾ ಎ ಎಸ್ ಒಂದು ಬೆಳ್ಳಿ , ನೀಲ್ ಎಂ ಜಿ ಎರಡು ಕಂಚು, ಹವೀಶ್ ಎಚ್ ಗಟ್ಟಿ ಒಂದು ಕಂಚು, ಗಗನ್ ಜಿ ಪ್ರಭು ಒಂದು ಚಿನ್ನ ಒಂದು ಕಂಚು, ಅಲಿಟಾ ಡಿಸೋಜ ಒಂದು ಕಂಚು, ಸಿದ್ದಿ ಎಸ್ ಶೆಟ್ಟಿ ಎರಡು ಚಿನ್ನ. ಒಟ್ಟು ಎಂಟು ಚಿನ್ನ ಆರು ಬೆಳ್ಳಿ ಹಾಗೂ ಏಳು ಕಂಚಿನ ಪದಗಳನ್ನು ಗೆದ್ದಿದ್ದಾರೆ.
ಇವರು ವೀ ವನ್ ಅಕ್ವಾ ಸೆಂಟರ್ ನ ಸಂತ ಅಲೋಷಿಯಸ್ ಈಜುಕೊಳ, ಎಮ್ಮೆ ಕೆರೆ ಸ್ಮಾರ್ಟ್ ಸಿಟಿ ಈಜುಕೊಳ, ಮಂಗಳೂರು ಮಹಾನಗರ ಪಾಲಿಕೆ ಈಜುಕೊಳ, ಹಾಗೂ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ಬಳಿ ಇರುವ ಯುವ ಜನ ಸೇವಾ ಕ್ರೀಡಾ ಇಲಾಖೆಯ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ.
ಇವರಿಗೆ ಮುಖ್ಯ ತರಬೇತು ದಾರರಾದ ಶ್ರೀ ಲೋಕರಾಜ್ ವಿ ಎಸ್ ವಿಟ್ಲ, ಶ್ರೀ ಅಭಿಲಾಶ್, ಹಾಗೂ ತರಬೇತುದಾರರಾದ ಸುಧೀನ್ ರಾಜ್ ಸಂಜಯ್, ಗಗನ್ ಜಿ ಪ್ರಭು, ಸಂಜೀವ್ ಉಳ್ಳೇಕರ್, ಆರೋಮಲ್, ಪ್ರಣಾಮ್ ತರಬೇತಿ ನೀಡಿದ್ದಾರೆ. ವಿಜೇತರನ್ನು ವೀ ವನ್ ಎಕ್ವಾ ಸೆಂಟರ್ ನ ನಿರ್ದೇಶಕರಾದ ಶ್ರೀ ನವೀನ್ ಹಾಗೂ ರೂಪ ಜಿ ಪ್ರಭು ಅವರು ಅಭಿನಂದಿಸಿದ್ದಾರೆ.

