ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರೇ ಆಗಿದ್ದ ಲೆಜೆಂಡ್ ಎಂ.ಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖಚಿತಪಡಿಸಿದೆ. ಐಪಿಎಲ್‌ನಲ್ಲಿ ಇಷ್ಟು ವರ್ಷಗಳ ಕಾಲ ಪ್ಲೇಯರ್ ಆಗಿ ನಿವೃತ್ತಿಯಾದ ಮಹಿ ಅವರನ್ನು ಸಿಎಸ್‌ಕೆ ನೂತನ ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ.
2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೇರಿಕೊಂಡ ಮಹಿ ಈವರೆಗೆ ಚೆನ್ನೈ ಪರ 272 ಪಂದ್ಯಗಳನ್ನಾಡಿದ್ದಾರೆ. ನಾಯಕನಾಗಿ 5 ಬಾರಿ ಟ್ರೋಫಿ ತಂದುಕೊಟ್ಟ ದಾಖಲೆಯನ್ನೂ ಬರೆದಿದ್ದಾರೆ. 38.3 ಸರಾಸರಿಯಲ್ಲಿ 5,439 ರನ್ ಗಳಿಸಿದ್ದಾರೆ. ಇದರಲ್ಲಿ 264 ಸಿಕ್ಸ್, 24 ಅರ್ಧಶತಕಗಳೂ ಸೇರಿವೆ.
2023ರಲ್ಲಿ ಸಿಎಸ್‌ಕೆ ಟ್ರೋಫಿ ಗೆದ್ದಾಗಲೇ, ಮಹಿ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ಧೋನಿ ಇನ್ನೂ ಎರಡು ಸೀಸನ್‌ಗಳನ್ನ ಆಡುವುದಾಗಿ ಹೇಳಿದ್ದರು. 2026ರ ಆವೃತ್ತಿಯಲ್ಲಿ ಮಹಿ ತಂಡದಲ್ಲಿದ್ದರೂ, ಒಂದೇ ಒಂದು ಪಂದ್ಯವನ್ನೂ ಆಡದೇ ಹೊರಗುಳಿದರು. ಈ ಬಾರಿ ಟೂರ್ನಿ ಆರಂಭ ಆಗುವುದಕ್ಕೆ ಮುನ್ನವೇ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿಶೇಷವೆಂದ್ರೆ ಇಷ್ಟು ದಿನ ಆಟಗಾರನಾಗಿ ನೋಡುತ್ತಿದ್ದ ಸಿಎಸ್‌ಕೆ ಅಭಿಮಾನಿಗಳು ಇನ್ಮುಂದೆ ಧೋನಿ ಅವರನ್ನ ಕೋಚ್ ಆಗಿ ನೋಡುತ್ತಾರೆ.

