ಪ್ಯಾರಿಸ್: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನ ಎರಡನೇ ದಿನ ಭಾರತಕ್ಕೆಗುಡ್ ನ್ಯೂಸ್ ಸಿಕ್ಕಿದೆ. ಈ ಮಹಾ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿದ್ದಾರೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ನಲ್ಲಿ ಭಾರತೀಯರ ಪರಾಕ್ರಮ ಮುಂದುವರೆದಿದೆ. ಭಾರತದ ಏಸ್ ಷಟ್ಲರ್ ಪಿವಿ ಸಿಂಧು ಅದ್ಧೂರಿ ಆರಂಭ ಪಡೆದರೆ, ಮಹಿಳೆಯರ 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ರಮಿತಾ ಫೈನಲ್ಗೇರಿದ್ದಾರೆ. ಹಾಗೆಯೇ ರೋಯಿಂಗ್ನಲ್ಲಿ ಬಾಲರಾಜ್ ಪನ್ವರ್ ಕ್ವಾರ್ಟರ್ಫೈನಲ್ಗೇರಿದ್ದಾರೆ.

