ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಕಂಚಿನ ಪದಕ ಗೆದ್ದ ಮನು ಬಾಕರ್ ಹಾಗೂ ಜಾವೆಲಿನ್‌ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಮದುವೆ ಆಗ್ತಾರಾ? ಎನ್ನುವ ಮಾತೊಂದು ಎಲ್ಲಡೆ ಇದೀಗ ಹರಿದಾಡುತ್ತಿದೆ. ಈ ಸಂಬಂಧ ಮನು ಭಾಕರ್ ತಂದೆ ಪ್ರತಿಕ್ರಿಯೆ ನೀಡಿದ್ದು,ಇದೆಲ್ಲವೂ ಸುಳ್ಳು. ಮನು ಬಾಕರ್ ಇನ್ನೂ ಚಿಕ್ಕವಳು. ಮನು ಬಾಕರ್ ತಾಯಿ ನೀರಜ್ ಚೋಪ್ರಾ ಅವರನ್ನು ತನ್ನ ಮಗನಂತೆ ನೋಡಿಕೊಳ್ಳುತ್ತಾರೆ ಎಂದು ಮದುವೆಯ ವದಂತಿಗೆ ತೆರೆ ಎಳೆದಿದ್ದಾರೆ.
ವಾಸ್ತವವಾಗಿ ಒಲಿಂಪಿಕ್ಸ್‌ನಲ್ಲಿ ಎರಡೆರಡು ಪದಕ ಗೆದ್ದ ಮನು ಅವರನ್ನು ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ನೇಮಿಸಲಾಗಿತ್ತು. ಹೀಗಾಗಿ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಮನು ಭಾಕರ್ ತಮ್ಮ ತಾಯಿ ಸುಮೇಧಾ ಭಾಕರ್ ಅವರೊಂದಿಗೆ ಪ್ಯಾರಿಸ್ಗೆ ತೆರಳಿದ್ದರು. ಈ ಮಧ್ಯೆ, ಮನು ಭಾಕರ್ ಮತ್ತು ಅವರ ತಾಯಿ, ಸ್ಟಾರ್ ಅಥ್ಲೀಟ್ ಮತ್ತು ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ಭೇಟಿಯಾಗಿದ್ದಾರೆ . ಈ ವೇಳೆ ತೆಗೆದ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವುದರ ಜೊತೆಗೆ ಮದುವೆಯ ಕುರಿತು ಊಹಾಪೋಹಗಳು ಹರಿದಾಡಿದ್ದವು. ಇದೀಗ ಈ ಕುರಿತು ಮನು ಭಾಕರ್ ತಂದೆ ಸ್ಪಷ್ಟನೆ ನೀಡಿದ್ದಾರೆ.

