ಒಲಂಪಿಕ್ಸ್‌ನಲ್ಲಿ ಒಂದಲ್ಲಾ ಒಂದು ವಿವಾದ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಮಹಿಳಾ ಬಾಕ್ಸರ್ ಎದುರು ಪುರುಷ ಬಾಕ್ಸರ್ನ ಕಣಕ್ಕಿಳಿಸಿದ ಆರೋಪ ಕೇಳಿಬಂದಿದೆ. ವಾಸ್ತವವಾಗಿ ಇಟಲಿಯ ಬಾಕ್ಸರ್ ಏಂಜೆಲಾ ಕ್ಯಾರಿನಿ 66 ಕೆಜಿ ವೆಲ್ಟರ್‌ವೇಟ್ ವಿಭಾಗದಲ್ಲಿ ಅಲ್ಜೀರಿಯಾದ ಬಾಕ್ಸರ್ ಇಮಾನ್ ಖಲೀಫ್ ಅವರನ್ನು ಎದುರಿಸಿದ್ದರು. ಆದರೆ ಪಂದ್ಯ ಆರಂಭವಾದ ಕೇವಲ 46 ಸೆಕೆಂಡುಗಳಲ್ಲಿಯೇ ಇಟಲಿಯ ಬಾಕ್ಸರ್ ಏಂಜೆಲಾ ಕ್ಯಾರಿನಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಮಹಿಳಾ ಸ್ಪರ್ಧಿಯ ವಿರುದ್ಧ ದೈಹಿಕವಾಗಿ ಪುರುಷನ ಗುಣಲಕ್ಷಣಗಳನ್ನು ಹೊಂದಿರುವ ಇಮಾನ್ ಖಲೀಫ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿರುವುದು.
ವಾಸ್ತವವಾಗಿ, ಲಿಂಗ ಬದಲಾವಣೆಗೆ ಒಳಗಾದ ಅನೇಕ ಪುರುಷ ಕ್ರೀಡಾಪಟುಗಳು ಸಹ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಹೀಗೆ ಲಿಂಗ ಬದಲಾವಣೆ ಮಾಡಿಕೊಂಡಿರುವ ಸ್ಪರ್ಧಿಗಳನ್ನು ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆಯೋಜಕರ ಈ ನಿರ್ಣಯವೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಲಿಂಗ ಬದಲಿಸಿಕೊಂಡಿರುವ ಪುರುಷರ ವಿರುದ್ಧ ಮಹಿಳಾ ಸ್ಪರ್ಧಿಗಳನ್ನು ಸ್ಪರ್ಧೆಗಿಳಿಸಿರುವುದು ಮಹಿಳಾ ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

